ಮಂಗಳೂರು: ಮಹಾನಗರ ಪಾಲಿಕೆಯ ಅತ್ತಾವರ ವಾರ್ಡಿನ ಕೆ.ಎಂ.ಸಿ ಮಣಿಪಾಲ್ ಸ್ಕೂಲ್ ಬಳಿ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಕೆ.ಎಂ.ಸಿ ಆಸ್ಪತ್ರೆಯ 6ನೇ ಅಡ್ಡರಸ್ತೆಯ ಮಣಿಪಾಲ್ ಸ್ಕೂಲ್ ರಸ್ತೆಯ ಅಭಿವೃದ್ಧಿಗಾಗಿ 1.5 ಕೋಟಿ ರೂಪಾಯಿ ಅನುದಾನವನ್ನು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಿಂದ ಬಿಡುಗಡೆಗೊಳಿಸಲಾಗಿದೆ. ಅತ್ತಾವರ ವಾರ್ಡಿನಲ್ಲಿ ಈಗಾಗಲೇ ಅನೇಕ ಜನೋಪಯೋಗಿ ಕಾಮಗಾರಿಗಳು ಪ್ರಗತಿ ಸಾಧಿಸುತಿದ್ದು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ನಗರದ ಕೆಲ ಭಾಗಗಳಲ್ಲಿ ಅನೇಕ ವರ್ಷಗಳಿಂದ ಬೇಡಿಕೆಯಿರುವ ಮತ್ತು ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳಿಗೆ ಹೆಚ್ಟಿನ ಒತ್ತು ನೀಡಲಾಗಿದೆ. ರಾಜಕಾಲುವೆಗಳ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಉತ್ತಮ ರಸ್ತೆ ನಿರ್ಮಾಣದ ಮೂಲಕ ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ನಿತಿನ್ ಕುಮಾರ್, ಸ್ಥಳೀಯ ಕಾರ್ಪೋರೇಟರ್ ಶೈಲೇಶ್ ಶೆಟ್ಟಿ ಅತ್ತಾವರ, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಮಹಾನಗರ ಪಾಲಿಕೆ ನಾಮನಿರ್ದೇಶನ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ರೂಪಾ ಡಿ ಬಂಗೇರ, ಎಸ್ಸಿ ಮೋರ್ಚಾದ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡೆ, ಮಂಡಲದ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ರೂಪ, ಶಕ್ತಿ ಪ್ರಮುಖರಾದ ಧರ್ಮೇಂದ್ರ ಅಮೀನ್, ಪುಷ್ಪರಾಜ್ ಶೆಟ್ಟಿ, ಪಕ್ಷದ ಮುಖಂಡರಾದ ವಸಂತ ಪೂಜಾರಿ, ಹಿರಿಯ ಕಾರ್ಯಕರ್ತರಾದ ನಾರಾಯಣ ಶೆಟ್ಟಿ, ರಾಜರತ್ನ, ಸುನಿಲ್, ರಾಜಗೋಪಾಲ್, ಮಧುಸೂದನ್ ಕುಲಾಲ್, ಪಕ್ಷದ ಬೂತ್ ಅಧ್ಯಕ್ಷರುಗಳಾದ ಪ್ರಮೋದ್ ಕೊಟ್ಟಾರಿ, ಅರ್ಚನಾ ರೈ, ಬಿಂದಿಯಾ, ಕಾರ್ಯಕರ್ತರಾದ ಪ್ರೀತಾ ಕಾಮತ್, ಲೋಲಾಕ್ಷಿ ಶೆಟ್ಟಿ, ನವೀನ್ ವಾಸ್, ವಾಸುದೇವ ಶ್ರಿಯಾನ್, ಪ್ರಾಣೇಶ್, ಸೋಮಶೇಖರ್, ಆಕಾಶ್ ರಾಕೇಶ್, ಸತೀಶ್, ಸುರೇಶ್, ವಿವೇಕ್ ಶೆಟ್ಟಿ, ತರುಣ್, ಪಕ್ಷದ ಹಿತೈಷಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment