ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರಿದ್ದರೆ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ - ಗೃಹಸಚಿವ ಆರಗ ಜ್ಞಾನೇಂದ್ರ

ಕಾರಿದ್ದರೆ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ - ಗೃಹಸಚಿವ ಆರಗ ಜ್ಞಾನೇಂದ್ರ

 


ಶಿವಮೊಗ್ಗ:  ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಆನಂದಪುರಂನ ಮುರುಘಾ ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈಗ 50 ಸಾವಿರ ಹಾಗೂ 1 ಲಕ್ಷಕ್ಕೂ ಹಳೆ ಕಾರುಗಳು ಸಿಗುತ್ತಿವೆ.

ಗಾರೆ ಮಾಡುವವರು, ಮೀನು ಹಿಡಿಯುವವರೂ ಕಾರು ತೆಗೆದುಕೊಂಡು ಹೋಗುತ್ತಾರೆ. ಅಂತವರ ಕಾರ್ಡ್ ಸಹಿತ ರದ್ದಾಗಿರುವುದು ಸರಿಯಲ್ಲ ಎಂದರು.

ವಿಷಯದ ಕುರಿತು ಶಾಸಕ ಎಚ್‌.ಹಾಲಪ್ಪ ಹರತಾಳು ಹಾಗೂ ನಾನು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇವೆ.

ಈ ಕಾನೂನಿನಿಂದ ಬಡವರು ಹೊಂದಿರುವ ಕಾರ್ಡ್ ರದ್ದಾಗುತ್ತದೆ. ಅವರ ಜೀವನಾಧಾರಕ್ಕೆ ತೊಂದರೆ ಆಗುತ್ತದೆ ಎಂದು ಮನವರಿಕೆ ಮಾಡಿದ್ದೇವೆ. ಬಡವರ ಮೇಲೆ ಕರುಣೆ ತೋರಿ ಸಿಎಂ ಆದೇಶ ಹೊರಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

0 Comments

Post a Comment

Post a Comment (0)

Previous Post Next Post