ಬೆಂಗಳೂರು: ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಅಪಾರ ಅಭಿಮಾನಿಗಳ ಮನಸ್ಸನ್ನು ಸೆಳೆದ ಕಾಫಿನಾಡು ಚಂದುಗೆ ಇದೀಗ ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ.
ಕಾಫಿನಾಡು ಚಂದುಗೆ ನಿರೂಪಕಿ ಅನುಶ್ರೀ ಟೈಟಾನ್ ವಾಚ್ ಗಿಫ್ಟ್ ನೀಡಿ ಅವರೇ ಚಂದು ಕೈಗೆ ವಾಚ್ ಕಟ್ಟಿದ್ದಾರೆ.
ಬರ್ತ್‌ಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಕಾಫಿನಾಡು ಚಂದು ಗುರುತಿಸಿಕೊಂಡಿದ್ದಾರೆ. ತಮ್ಮ ಪ್ರತಿ ವೀಡಿಯೋದಲ್ಲಿಯೂ ನಾನು ಶಿವಣ್ಣ ಮತ್ತು ಪುನೀತ್ ಅಣ್ಣ ಅವರ ಅಭಿಮಾನಿ ಎಂದು ತಮ್ಮ ಅಭಿಮಾನವನ್ನ ತಿಳಿಸುತ್ತಿದ್ದರು.
ಡಿಕೆಡಿ ವೇದಿಕೆಯಲ್ಲಿ ಶಿವಣ್ಣ ಮತ್ತು ಅನುಶ್ರೀ ಜೊತೆ ಇಡೀ ತಂಡವನ್ನ ಕಾಫಿನಾಡು ಚಂದು ಭೇಟಿಯಾಗಿದ್ದಾರೆ. ಈ ವೇಳೆ ಅನುಶ್ರೀ, ಚಂದುಗೆ ವಾಚ್ ಗಿಫ್ಟ್ ನೀಡಿದ್ದಾರೆ.
ಇತ್ತೀಚೆಗೆ ಡಿಕೆಡಿ ಶೋನಲ್ಲಿ ಕಾಫಿನಾಡು ಚಂದು ಅವರ ಆಸೆಯಂತೆ ಕಡೆಗೂ ಶಿವಣ್ಣ ಅವರನ್ನ ಭೇಟಿಯಾಗಿ ಬಂದಿದ್ದಾರೆ. ಈ ಕಾರ್ಯಕ್ರಮದ ಶೂಟಿಂಗ್ ನಂತರ ಹೊರಭಾಗದಲ್ಲಿ ಚಂದು ಕೈಗೆ ಟೈಟಾನ್ ವಾಚ್ ಕಟ್ಟಿ, ಅನುಶ್ರೀ ಶುಭಹಾರೈಸಿದ್ದಾರೆ. ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ.
ಅನುಶ್ರೀ ಅವರ ಗಿಫ್ಟ್ ನೋಡಿ, ಕಾಫಿನಾಡು ಚಂದು ಕೂಡ ಖುಷಿಪಟ್ಟಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Post a Comment