ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅನ್ಲೋಡ್ ವೇಳೆ 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಟಿಪ್ಪರ್

ಅನ್ಲೋಡ್ ವೇಳೆ 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಟಿಪ್ಪರ್

 


ಕಾರ್ಕಳ: ಟಿಪ್ಪರ್ ನಿಂದ ಸೈಜುಕಲ್ಲುಗಳನ್ನು ಅನ್ ಲೋಡ್ ಮಾಡುತ್ತಿದ್ದ ವೇಳೆ 40 ಅಡಿ ಎತ್ತರದಿಂದ ಕೆಳಗೆ ಮಗುಚಿ ಬಿದ್ದು, ಚಾಲಕ ಮೃತಪಟ್ಟ ಘಟನೆಯೊಂದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.


ಮೃತ ಚಾಲಕನನ್ನು ಆಸಿಫ್ ಎಂದು ಗುರುತಿಸಲಾಗಿದೆ. ಕಾರ್ಕಳ ತಾಲೂಕಿನ ಸೂಡ ಎಂಬಲ್ಲಿ ಸುರೇಶ್ ಶೆಟ್ಟಿ ಎಂಬವರ ಮಾಲಕತ್ವದ ಪ್ರಸ್ತುತ ಕೇರಳ ವಾಸಿ ಬಾಸಿತ್ ಎಂಬವವರು ಲೀಸ್ ಗೆ ಪಡೆದುಕೊಂಡಿರುವ ಓಂ ಕ್ರಶರ್ ನಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.


ಎಂದಿನಂತೆ ಮಂಗಳವಾರದಂದು ಕಲ್ಲು ಕೋರೆಯಿಂದ ಸೈಜು ಕಲ್ಲುಗಳನ್ನು ಟಿಪ್ಪರ್ ನಲ್ಲಿ ತಂದು ಓಂ ಕ್ರಶರ್ ನಲ್ಲಿ ಅನ್ ಲೋಡ್ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. 


ತಕ್ಷಣವೇ ಚಾಲಕನನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಅಷ್ಟು ಹೊತ್ತಿಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

0 Comments

Post a Comment

Post a Comment (0)

Previous Post Next Post