ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಲಿಸುತ್ತಿದ್ದ ವಾಹನದ ಮೇಲೆ ಉರುಳಿ ಬಿದ್ದ ಬೃಹತ್ ಮರ, ತಪ್ಪಿದ ಭಾರೀ ಅನಾಹುತ

ಚಲಿಸುತ್ತಿದ್ದ ವಾಹನದ ಮೇಲೆ ಉರುಳಿ ಬಿದ್ದ ಬೃಹತ್ ಮರ, ತಪ್ಪಿದ ಭಾರೀ ಅನಾಹುತ

 


ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಗುಂಬೆ ಘಾಟಿನಲ್ಲಿ ಚಲಿಸುತ್ತಿದ್ದ ವಾಹನದ ಮೇಲೆ ಬೃಹತ್ ಮರ ಉರುಳಿ ಬಿದ್ದಿದ್ದು, ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ.


ಆಗುಂಬೆ ಘಾಟಿಯ ಎರಡನೇ ತಿರುವುವಿನಲ್ಲಿ ಕಳೆದ ತಡರಾತ್ರಿ ಚಲಿಸುತ್ತಿದ್ದ ಟಾಟಾ ಏಸ್​ ಮೇಲೆ ಮರ ಉರುಳಿ ಬಿದ್ದಿದೆ. ವಾಹನದಲ್ಲಿ ಚಾಲಕ ಸೇರಿ ಇನ್ನೋರ್ವ ಮುಂಭಾಗದಲ್ಲಿ ಇದ್ದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ.


ಮರ ಬಿದ್ದ ತಕ್ಷಣ ಗಾಬರಿಯಾದ ಚಾಲಕ ವಾಹನ ಬಿಟ್ಟು ಕೆಳಗೆ ಇಳಿದು ಓಡಿ ಹೋಗಿದ್ದಾನೆ.


 ಮರ ಬಿದ್ದ ಕಾರಣ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ನಂತರ ಅರಣ್ಯಾಧಿಕಾರಿಗಳು, ಪೊಲೀಸರು ಬಂದು ಮರವನ್ನು ತೆರವುಗೊಳಿಸಿದ್ದಾರೆ. 


0 Comments

Post a Comment

Post a Comment (0)

Previous Post Next Post