ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 6 ಮಂದಿ ನಕಲಿ ಪತ್ರಕರ್ತರ ಬಂಧನ

6 ಮಂದಿ ನಕಲಿ ಪತ್ರಕರ್ತರ ಬಂಧನ

 


ರಾಯಚೂರು : ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಬೆಂಗಳೂರು ಮೂಲದ 6 ಮಂದಿ ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆಯೊಂದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್​ನಲ್ಲಿ ನಡೆದಿದೆ.


ಬಂಧಿತ ನಕಲಿ ಪತ್ರಕರ್ತರು ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ರಾಜು ಬಿ, ನಾಗರಾಜ ಸಿ, ಪ್ರದೀಪಗೌಡ, ಅರ್ಪಿತಾ, ಮಹಾದೇವಿ, ಮೇಘ ಬಂಧಿತ ನಕಲಿ ಪತ್ರಕರ್ತರು.


ಮುದಗಲ್ ನ ಅಕ್ಕಿ ವ್ಯಾಪಾರಿ ವಿರೇಶ ಎನ್ನುವವರ ಅಂಗಡಿಗೆ ನುಗ್ಗಿ ಅವರಿಗೆ ಬ್ಲ್ಯಾಕ್​ಮೇಲ್ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿದ್ದು, ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. 


ಅಕ್ಕಿ ಮಾರಾಟಗಾರ ವಿರೇಶ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ನಕಲಿ ಪತ್ರಕರ್ತರನ್ನು ಬಂಧಿಸಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments

Post a Comment

Post a Comment (0)

Previous Post Next Post