ಅಂಕೋಲಾ: ಸವಾರನ ನಿಯಂತ್ರಣ ತಪ್ಪಿ ಬೈಕ್ ಉರುಳಿದ ಬಿದ್ದ ಪರಿಣಾಮ ಕಾಲೇಜ್ ಉಪನ್ಯಾಸಕ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ತಾಲೂಕಿನ ರಾ.ಹೆ.66ರ ಬೆಳೆಸೆಯಲ್ಲಿ ಗುರುವಾರ ನಡೆದಿದೆ.
ತಾಲೂಕಿನ ವಾಸರೆಕುದ್ರಿಗೆಯ ನಿವಾಸಿ ಅರವಿಂದ್ ಬೀರಾ ಆಗೇರ (49) ಮೃತಪಟ್ಟ ದುರ್ದೈವಿ.
ಅರವಿಂದ್ ಅಂಕೋಲಾ ಪಟ್ಟಣದ ಪಿ.ಎಂ.ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ವಿಷಯದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮುಂಜಾನೆ ವಾಸರೆ ಕುದ್ರಿಗೆಯಿಂದ ಕಾಲೇಜಿಗೆ ಬರುತ್ತಿರುವ ವೇಳೆ ಬೈಕ್ ಸ್ಕಿಡ್ ಆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.
ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅಂಕೋಲಾ ದಲ್ಲಿ ಪ್ರಕರಣ ದಾಖಲಾಗಿದೆ.
Post a Comment