ಏತಡ್ಕ: ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಏತಡ್ಕ- ಕಿನ್ನಿಂಗಾರು ರಸ್ತೆಯ ಬಳಿ ಇರುವ ಏತಡ್ಕ ಬಸ್ಸು ತಂಗುದಾಣದಲ್ಲಿ ಅರ್ಧದಷ್ಟು ನೀರು ತುಂಬಿದ್ದು, ಬಸ್ಸು ತಂಗುದಾಣ ಇದ್ದೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಮಣ್ಣು ಮರಳು ತುಂಬಿ ತಂಗುದಾಣ ಸಂಪೂರ್ಣ ಮುಚ್ಚಿಹೋದಂತಿದೆ.
ಊರಿನ ಜನರಿಗೆ ಈ ಬಸ್ಸು ತಂಗುದಾಣ ಯಾವುದೇ ರೀತಿಯ ಉಪಕಾರವೂ ಇಲ್ಲದಂತಾಗಿದೆ. ಶಾಲಾ ವಾಹನಗಳಿಗಾಗಿ ಮಕ್ಕಳು, ಸಾರಿಗೆ ವಾಹನಗಳಿಗಾಗಿ ವೃದ್ಧರು ಈ ಬಸ್ಸು ತಂಗುದಾಣವನ್ನೇ ಅವಲಂಬಿಸಿರುತ್ತಾರೆ. ಆದ್ದರಿಂದ ಈ ಬಸ್ಸು ತಂಗುದಾಣಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಕೂಡಲೇ ಗಮನ ಹರಿಸಬೇಕಾಗಿದೆ.
-ಕಾರ್ತಿಕ್ ಕುಮಾರ್
Post a Comment