ಮಂಗಳೂರು: ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಸಮಿತಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವ, ಗ್ರಾಮೋತ್ಸವ, ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ ಒಳಾಂಗಣ- ಹೊರಾಂಗಣ ಆಟೋಟ ಸ್ಪರ್ಧಾ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ನ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಡಾ. ಸಂಜೀವ್ ರೈ ಬಿ ದೀಪಬೆಳಗಿ ಚಾಲನೆ ನೀಡಿದರು. ಈ ವೇಳೆ ಮಂಗಳೂರು ಮನಪ ಮೇಯರ್ ಪ್ರೇಮಾನಂದ್ ಶೆಟ್ಟಿ, ಯಮುನ ಹೋಮ್ಸ್ ಆ್ಯಂಡ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಪುರುಷೋತ್ತಮ್ ಆರ್ ಶೆಟ್ಟಿ, ಶ್ರೀ ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಪ್ರೊ. ಎಂ ಬಾಲಕೃಷ್ಣ ಶೆಟ್ಟಿ, ಸಾರ್ವಜನಿಕ ಗಣೇಶೋತ್ಸವ ಸಮೀತಿ ಕೇಂದ್ರ ಮೈದಾನ ಗೌರವ ಅಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ನಿ. ಅಧ್ಯಕ್ಷ ಸುರೇಶ್ ರೈ, ತಾರಾನಾಥ್ ಶೆಟ್ಟಿ ಬೋಳಾರ್, ವಸಂತ್ ಉರ್ವ, ಎಂ.ಪಿ ದಿನೇಶ್, ನಾಗರಾಜ್ ಆಚಾರ್ಯ, ಕೃಷ್ಣ ಶೆಟ್ಟಿ ಎ, ದೇವಿ ಪ್ರಸಾದ್ ಶೆಟ್ಟಿ, ಜನ್ಮ ದಿನೋತ್ಸವ ಸಮಿತಿ ಮಹಿಳಾ ವಿಭಾಗದ ಸಂಚಾಲಕಿ ನಿವೇದಿತಾ ಎನ್ ಶೆಟ್ಟಿ ಸ್ವಾಗತಿಸಿದರು, ರವಿಪ್ರಭ ಯಶವಂತ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ವಾರುಣಿ ನಾಗರಾಜ್ ಆಚಾರ್ಯ ನೆರವೇರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment