ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ನರ್ಸಿಂಗ್ ಹೋಮ್‌ಗೆ ಸುವರ್ಣ ಸಂಭ್ರಮ: ಸಿಬ್ಬಂದಿಗಳಿಗಾಗಿ ವಿವಿಧ ಆಟಗಳ ಆಯೋಜನೆ

ಮಂಗಳೂರು ನರ್ಸಿಂಗ್ ಹೋಮ್‌ಗೆ ಸುವರ್ಣ ಸಂಭ್ರಮ: ಸಿಬ್ಬಂದಿಗಳಿಗಾಗಿ ವಿವಿಧ ಆಟಗಳ ಆಯೋಜನೆ


ಮಂಗಳೂರು: ಮಂಗಳೂರು ನರ್ಸಿಂಗ್‌ ಹೋಮ್‌ನ 50ನೇ ವರ್ಷದ- ಸುವರ್ಣ ಮಹೋತ್ಸವದ ಅಂಗವಾಗಿ ಇಂದು (ಭಾನುವಾರ ಜುಲೈ 24) ಸಿಬ್ಬಂದಿಗಳಿಗಾಗಿ ವಿವಿಧ ಬಗೆಯ ಆಟಗಳನ್ನು ಆಯೋಜಿಸಲಾಯಿತು.

ಆಗಸ್ಟ್‌ 18ರಂದು ಆಸ್ಪತ್ರೆಯ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ನಡೆಯಲಿದ್ದು, ಅದರ ಅಂಗವಾಗಿ ಪ್ರತಿ ವಾರವೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆಯುವ ಸ್ಪರ್ಧೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಅನಂತಲಕ್ಷ್ಮಿ ಮತ್ತು ಡಾ. ಬೃಜೇಶ್ ಖಂಡಿಗೆ ಹಾಗೂ ಎಲ್ಲ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಡಾ. ನಂದಕಿಶೋರ್‌, ಡಾ. ಸ್ಮಿತಾ ಖಂಡಿಗೆ ಮತ್ತು ಡಾ. ಹೇಮಂತ್‌ ಕುಮಾರ್‌ ಉಪಸ್ಥಿತರಿದ್ದರು.

ಕರಾವಳಿ ಜಿಲ್ಲೆಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಮಂಗಳೂರು ನರ್ಸಿಂಗ್ ಹೋಮ್‌ ಕಳೆದ 50 ವರ್ಷಗಳಿಂದ ಕಾರ್ಯನಿರತವಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post