ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲುಷಿತ ನೀರು ಕುಡಿದು ಬಾಲಕಿ ಸಾವು; 20 ಮಂದಿ ಆಸ್ಪತ್ರೆ ದಾಖಲು

ಕಲುಷಿತ ನೀರು ಕುಡಿದು ಬಾಲಕಿ ಸಾವು; 20 ಮಂದಿ ಆಸ್ಪತ್ರೆ ದಾಖಲು

 


ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಗೊನಾಳ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 11 ವರ್ಷದ ಬಾಲಕಿ ಮೃತಪಟ್ಟಿದ್ದು, 20 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಲಷಿತ ನೀರು ಕುಡಿದ ನಂತರ ಕೆಲವು ಜನರು ಬೇಧಿ, ವಾಂತಿ ಮತ್ತಿತರ ಲಕ್ಷಣಗಳ ಬಗ್ಗೆ ದೂರು ನೀಡಿದ ಬಳಿಕ ಎರಡು ದಿನಗಳ ನಂತರ ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ. ಕಂಪ್ಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸುಕನ್ಯಾ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾಳೆ.


ಆರೋಗ್ಯಾಧಿಕಾರಿಗಳು ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಗಾಗಿ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. ನರಿಹಾಲ ಹೊಳೆ ನೀರು, ಆಹಾರದ ನೀರಿನೊಂದಿಗೆ ಬೆರೆತು ನೀರು ಕಲುಷಿತವಾಗಿರುವುದಾಗಿ ಗೋನಾಳ್ ಗ್ರಾಮಸ್ಥರು ಆರೋಪಿಸಿದ್ದಾರೆ.


ನೀರು ಕಲುಷಿತವಾಗಿರುವಂತೆ ಕಾಣುತ್ತಿದೆ. ಆದರೆ, ಪ್ರಯೋಗಾಲಯದ ಫಲಿತಾಂಶ ಬಂದ ಬಳಿಕವೇ ಅದು ದೃಢವಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಎಲ್. ಜನಾರ್ಧನಾ ಹೇಳಿದ್ದಾರೆ. ಕಲುಷಿತ ನೀರಿನಿಂದ ಅಸ್ವಸ್ಥರಾದ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.


0 Comments

Post a Comment

Post a Comment (0)

Previous Post Next Post