ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಡೆತನದ ಸ್ಕೂಲ್ ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಸ್ಕೂಲ್ ಗೆ ಡಿಕೆಶಿ ಪುತ್ರಿ ಐಶ್ವರ್ಯಾ ಆಗಮಿಸಿದ್ದಾರೆ.
ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೋಷಕರಿಗೆ ಪರಿಸ್ಥಿತಿಯ ಬಗ್ಗೆ ಪುತ್ರಿ ಹೇಳುತ್ತಿದ್ದಾರೆ.
ಮಕ್ಕಳೆಲ್ಲರೂ ಸೇಫ್ ಆಗಿದ್ದಾರೆ. ಯಾರು ಭಯಪಡಬೇಡಿ ಒಂದು ಅರ್ಧ ಗಂಟೆ ಟೈಮ್ ಕೊಡಿ. ಎಲ್ಲವೂ ಸರಿ ಹೋಗುತ್ತದೆ. ಯಾರೂ ಭಯ ಪಡೋ ಅವಶ್ಯಕತೆ ಇಲ್ಲ ಎಂದಿದ್ದಾರೆ.
ನೀವು ಈ ರೀತಿ ಭಯ ಪಡ್ತಿರೋದ್ರಿಂದ ಮ್ಯಾನೇಜ್ಮೆಂಟ್ ಗೆ ಕಷ್ಟ ಆಗ್ತಿದೆ. ಕಂಟ್ರೋಲ್ ಮಾಡೋಕೆ ನಾವೂ ಎಲ್ಲ ಪ್ರಯತ್ನ ಮಾಡ್ತಿದೀವಿ ಎಂದು ಹೇಳಿದ್ದಾರೆ.
Post a Comment