ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೇರಳದ ಪಯ್ಯನ್ನೂರಿನ ಆರ್ ಎಸ್ ಎಸ್ ಕಛೇರಿಯ ಮೇಲೆ ಬಾಂಬ್ ದಾಳಿ

ಕೇರಳದ ಪಯ್ಯನ್ನೂರಿನ ಆರ್ ಎಸ್ ಎಸ್ ಕಛೇರಿಯ ಮೇಲೆ ಬಾಂಬ್ ದಾಳಿ

 


ಕಣ್ಣೂರು - ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿನ ಆರ್‌ಎಸ್‌ಎಸ್‌ ಕಚೇರಿಯ ಮೇಲೆ ಬಾಂಬ್ ದಾಳಿ ನಡೆದಿದ್ದು, ಕಿಟಕಿ ಗಾಜುಗಳು ಹಾನಿಗೊಳಗಾಗಿವೆ.


ದೃಶ್ಯದಲ್ಲಿ ಕಂಡು ಬಂದಂತೆ ಇಂದು ಮುಂಜಾನೆ ಕಚೇರಿಯ ಮೇಲೆ ಬಾಂಬ್ ದಾಳಿಯಾಗಿದೆ.


ಸ್ಫೋಟದಿಂದ ಕಚೇರಿಯ ಕಿಟಕಿ ಗಾಜುಗಳು ಜಕ್ಕಂಗೊಂಡಿವೆ. ಉಳಿದಂತೆ ಹೆಚ್ಚಿನ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಸುತ್ತಮುತ್ತಲ ಪರಿಸರವನ್ನು ಅವಲೋಕನ ನಡೆಸಿದ್ದಾರೆ.

ಇತ್ತೀಚೆಗೆ ಕೇರಳದಲ್ಲಿ ಈ ರೀತಿಯ ಬಾಂಬ್ ದಾಳಿಗಳು ಸಾಮಾನ್ಯವಾಗಿವೆ. ಕೇರಳದ ತಿರುವನಂತಪುರಂನ ಸಿಪಿಐಎಂನ ಕೇಂದ್ರ ಕಚೇರಿಯೂ ದಾಳಿಗೆ ಒಳಗಾಗಿತ್ತು.

ಹಲವಾರು ಕಾಂಗ್ರೆಸ್ ಕಚೇರಿಗಳ ಮೇಲೂ ದಾಳಿಯಾಗಿದೆ. 

0 Comments

Post a Comment

Post a Comment (0)

Previous Post Next Post