ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಕ್ತದಾನದಿಂದ ಪುಣ್ಯ ಪ್ರಾಪ್ತಿ: ರಕ್ತದಾನ ಶಿಬಿರ ಉದ್ಘಾಟಿಸಿ, ನಾಗರಾಜ್ ಶೇಟ್

ರಕ್ತದಾನದಿಂದ ಪುಣ್ಯ ಪ್ರಾಪ್ತಿ: ರಕ್ತದಾನ ಶಿಬಿರ ಉದ್ಘಾಟಿಸಿ, ನಾಗರಾಜ್ ಶೇಟ್


ಮಂಗಳೂರು: ದೈವಜ್ಞ ಬ್ರಾಹ್ಮಣರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ದಶಮಾನೋತ್ಸವ ಪ್ರಯುಕ್ತ ರಕ್ತದಾನ ಶಿಬಿರವು ರವಿವಾರ (10-07-2022) ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಿತು.


ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಮಾಜ ಸೇವಕ, ನೂತನ್ ಗ್ಯಾಸ್ ಡೀಲರ್ ಮಾಲಕ ನಾಗರಾಜ್ ಶೇಟ್ ಅವರು ರಕ್ತದಾನ ಅತೀ ಶ್ರೇಷ್ಠ ದಾನವಾಗಿದ್ದು, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಪ್ರಾಣ ಉಳಿಸ ಬಹುದು. ಇದರಿಂದ ರಕ್ತದಾನ ಮಾಡುವವರಿಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನುಡಿದರು.


ದೈವಜ್ಞ ಬ್ರಾಹ್ಮಣರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶ್ರೀಪಾದ್ ಶೇಟ್. ಗೌರವಾಧ್ಯಕ್ಷ ಅರುಣ್ ಶೇಟ್, ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ ಅಶೋಕ ಶೇಟ್, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಸುಧಾಕರ್ ಶೇಟ್, ದೈವಜ್ಞ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪ ಕೃಷ್ಣಾನಂದ ಶೇಟ್,  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅರುಣ ಜಿ ಶೇಟ್. ಚಿನ್ನ ಬೆಳ್ಳಿ ಸಂಘದ ಕಾರ್ಯದರ್ಶಿ ರವೀಂದ್ರ ಸಿ ಗೋಕರ್ಣಕರ್,  ಯುವಕ ಮಂಡಳಿಯ ಅಧ್ಯಕ್ಷ ಗಣೇಶ ಶೇಟ್, ಇಂಡಿಯಾನ್ ರೆಡ್ ಕ್ರಾಸ್ ಸೊಸೈಟಿಯ ಪ್ರಮುಖರಾದ ಡಾ. ಪ್ರವೀಣ್ ಕುಮಾರ್, ಡಾ. ಜೆ.ಎನ್ ಭಟ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.


ದೈವಜ್ಞ ಸೌರಭ ಪತ್ರಿಕೆಯ ಪ್ರಕಾಶಕ ರಾಜೇಂದ್ರಕಾಂತ ಶೇಟ್ ಹಾಗೂ ವಿಜಯಕಾಂತ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 90ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post