ಬದಿಯಡ್ಕ: ಅಗಲ್ಪಾಡಿ ಯಾದವ ಸೇವಾಸಂಘದ ವತಿಯಿಂದ ಸಂಘದ ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ನೀಡುವ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಸಮಾರಂಭವನ್ನು ಅಖಿಲ ಕೇರಳ ಯಾದವ ಸಭಾದ ರಾಜ್ಯ ಅಧ್ಯಕ್ಷ ಶಿವರಾಮನ್ ಮೇಸ್ತ್ರಿ ಅರುವತ್ ಹಾಗೂ `ಸಾರಥಿ' ಯುಎಇ ಅಧ್ಯಕ್ಷ ನಾರಾಯಣ ಕೇಳೋತ್ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು.
ಅಗಲ್ಪಾಡಿ ಯಾದವ ಸೇವಾಸಂಘದ ಅಧ್ಯಕ್ಷ ಸುಧಾಮ ಪದ್ಮಾರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗೋಪಾಲ ಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ಟರ್ ಅಗಲ್ಪಾಡಿ ಪ್ರಾಸ್ತಾವಿಕ ಮಾಡಿದರು. ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಮಹಿಳಾ ವಿಭಾಗದ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ ಅವರು ವಿದ್ಯಾರ್ಥಿವೇತನ ವಿತರಣೆಗೆ ಚಾಲನೆ ನೀಡಿದರು. ಅಂಗನವಾಡಿಯಿಂದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆದುಕೊಂಡರು.
ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ, ಯಾದವ ಸೇವಾಸಂಘ ಅಗಲ್ಪಾಡಿ ಇದರ ಗೌರವಾಧ್ಯಕ್ಷ ಜನಾರ್ಧನ ಮಣಿಯಾಣಿ ಬೆದ್ರುಕೂಡ್ಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಕಲ್ಲಕಟ್ಟ ಸ್ವಾಗತಿಸಿ, ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ವಂದಿಸಿದರು. ಲಾವಣ್ಯ ಗಿರೀಶ್ ಮತ್ತು ರಮ್ಯಾ ದೀಪಕ್ ಪ್ರಾರ್ಥನೆಯನ್ನು ಹಾಡಿದರು. ಶ್ರೀಮಂದಿರದ ಕಾರ್ಯದರ್ಶಿ ರಾಜೇಶ್ ಮಾಸ್ಟರ್ ಅಗಲ್ಪಾಡಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment