ಮಡಿಕೇರಿ; ಕೊಡಗು ಜಿಲ್ಲಾದ್ಯಂತ ಭಾರಿ ಮಳೆಯಾಗಿದ್ದು, ಗಾಳಿ ಸಹಿತ ಮಳೆಗೆ ಹಲವು ತಗ್ಗುಪ್ರದೇಶಗಳು ಜಲಾವೃತವಾಗಿವೆ. ಸತತ ನಾಲ್ಕು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ, ಇನ್ನು ತಲಕಾವೇರಿ ಭಾಗಮಂಡಲ ಪ್ರದೇಶದಲ್ಲಿ ಕಲ್ಲೊಂದು ರಸ್ತೆಗೆ ಉರುಳಿ ಬಿದ್ದಿದೆ.
ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಗಾಳಿಗೆ ಮುರಿದುಬಿದ್ದಿವೆ. ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಜನರು ಪರದಾಡುವಂತಾಗಿದೆ.
ಸೋಮವಾರ ರಾತ್ರಿ ಇಡೀ ಮಡಿಕೇರಿ ನಗರಕ್ಕೆ ವಿದ್ಯುತ್ ಸರಬರಾಜು ನಿಂತಿತ್ತು. ಬೆಳಿಗ್ಗೆ ವಿದ್ಯುತ್ ಪೂರೈಕೆ ಆಗಿದ್ದರೂ ಕುಶಾಲನಗರ ಸಮೀಪ ವಿದ್ಯುತ್ ಲೈನ್ ನಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ.
ಮಂಗಳವಾರ ಸಂಜೆಯವರೆಗೂ ವಿದ್ಯುತ್ ಪೂರೈಕೆ ಮಡಿಕೇರಿ ನಗರಕ್ಕೆ ಸ್ಥಗಿತಗೊಳ್ಳಲಿದೆ ಎಂದು ಸೆಸ್ಕ್ ತಿಳಿಸಿದೆ. ಹಾರಂಗಿ ಜಲಾಶಯದಿಂದ 12,866 ಕ್ಯುಸೆಕ್ ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ತಗ್ಗು ಪ್ರದೇಶದ ಜನರಲ್ಲಿ ಆತಂಕ ಮೂಡಿದೆ.
Post a Comment