ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಟವಾಡುತ್ತಿದ್ದ 5 ವರ್ಷದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಸಾವು

ಆಟವಾಡುತ್ತಿದ್ದ 5 ವರ್ಷದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಸಾವು

 


ಉಡುಪಿ: ಆಟವಾಡುತ್ತಿದ್ದ ಮಗು ನೀರಿನ‌ ಹೊಂಡಕ್ಕೆ ಬಿದ್ದು 5 ವರ್ಷದ ಬಾಲಕ ಮೃತಪಟ್ಟ‌ ಘಟನೆಯೊಂದು ಉಪ್ಪೂರು ಸಮೀಪದ ಕೆ.ಜಿ.ರೋಡ್ ಎಂಬಲ್ಲಿ ನಡೆದಿದೆ.


ನಾರ್ಮನ್ ಹಾಗೂ ಸಿಲ್ವಿಯಾ ದಂಪತಿಯ ಪುತ್ರ ಲಾರೆನ್ ಲೆವಿಸ್(5) ಮೃತ ಬಾಲಕ. ಬುಧವಾರ ಸಂಜೆ ಮನೆ ಸಮೀಪ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿತ್ತೆನ್ನಲಾಗಿದೆ.

ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮನೆ ಸಮೀಪದ ನೀರಿನ ಹೊಂಡದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.


ಆಟ ಆಡುತ್ತಿದ್ದ ಬಾಲಕ ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ನಾರ್ಮನ್ ಅವರ ಕುಟುಂಬ ಇತ್ತೀಚೆಗೆ ಕುವೈಟ್ ನಿಂದ ರಜೆ ಹಿನ್ನೆಲೆ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



0 Comments

Post a Comment

Post a Comment (0)

Previous Post Next Post