ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಶ್ರೀರಾಮ ಪ್ರೌಢಶಾಲೆ ಅರ್ಕುಳ ಫರಂಗಿಪೇಟೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ರಚನಾ ಕಮ್ಮಟವನ್ನು ಜೂನ್ 18ರ ಶನಿವಾರದಂದು 10:15ಕ್ಕೆ ಶ್ರೀರಾಮ ಪ್ರೌಢಶಾಲೆ ಅರ್ಕುಳ ಫರಂಗಿಪೇಟೆ ಇಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಅರ್ಕುಳ ಶ್ರೀರಾಮ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಎ.ಕೆ ಜಯರಾಮ ಶೇಕ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣಕರ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಅರ್ಕುಳ ಶ್ರೀರಾಮ ಪ್ರೌಢಶಾಲೆಯ ಸಂಚಾಲಕರಾದ ಕೆ ಗೋವಿಂದ ಶೆಣೈ, ಅರ್ಕುಳ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಕೆ.ಆರ್ ದೇವದಾಸ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾಕ್ಟರ್ ಮುರಲೀ ಮೋಹನ್ ಚೂoತಾರು, ಮತ್ತು ಶ್ರೀ ಗಣೇಶ್ ಪ್ರಸಾದ್ ಜೀ ಉಪಸ್ಥಿತರಿರುವರು.
ಕಥೆ, ಕವನ ಮತ್ತು ಚುಟುಕು ರಚನೆಗಳ ಕುರಿತು ಡಾ. ಮೀನಾಕ್ಷಿ ರಾಮಚಂದ್ರ, ರಘು ಇಡ್ಕಿದು ಮತ್ತು ಎನ್. ಸುಬ್ರಾಯ ಭಟ್ ಮಾಹಿತಿ ನೀಡುವರು. ಕನ್ನಡ ಗೀತೆಗಳ ಗಾಯನವನ್ನು ಶ್ರೀಮತಿ ರತ್ನಾವತಿ ಜೆ. ಬೈಕಾಡಿ ನಡೆಸಿಕೊಡುವರು.
Post a Comment