ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಳೂರಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಯುವತಿಗೆ ಕಿರುಕುಳ

ಬೆಂಗಳೂರಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಯುವತಿಗೆ ಕಿರುಕುಳ

 


ಮಂಗಳೂರು : ಖಾಸಗಿ ಬಸ್ ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಸಹ ಪ್ರಯಾಣಿಕ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಿಯನ್ನು ಬಿ.ಸಿ ರೋಡ್ ನ ನಿವಾಸಿ ಮಹಮ್ಮದ್ ಮುಸ್ತಾಪ ಎಂದು ಗುರುತಿಸಲಾಗಿದೆ


ಯುವತಿ ವಿಮಾನ ಕಂಪೆನಿಯ ಇಂಟವ್ಯೂ ನಿಮಿತ್ತ ಖಾಸಗಿ ಬಸ್ ನಲ್ಲಿ ಮಂಗಳೂರಿಗೆ ಬರುತ್ತಿದ್ದಳು. ಜೂ.7 ರ ಮುಂಜಾನೆ 5 ಗಂಟೆಗೆ ತಾನು ಪ್ರಯಾಣಿಸುತ್ತಿದ್ದಾಗ ಬಲಭಾಗದಲ್ಲಿ ಡ್ರೈವರ ಸೀಟ್ ಹಿಂಬಾಗದ ಸ್ಲೀಪರ್ ಸೀಟ್ ನಲ್ಲಿದ್ದ ಮುಸ್ತಾಪ ಅನುಚಿತವಾಗಿ ವರ್ತಿಸಿದ್ದು, ಈ ವೇಳೆ ಬಸ್ಸಿನ ಸಿಬ್ಬಂದಿಗೆ ಹೇಳಬೇಕೆಂದಾಗ ಪಂಪ್ ವೆಲ್ ಸ್ಟಾಪ್ ನಲ್ಲಿ ಬಸ್ಸಿನಿಂದ ಇಳಿದು ಬೆದರಿಕೆ ಹಾಕಿ ಓಡಿಹೋಗಿದ್ದಾನೆ ಎಂದು ಕಂಕನಾಡಿ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ .


ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

0 Comments

Post a Comment

Post a Comment (0)

Previous Post Next Post