ಸುಳ್ಯ: ಇಲ್ಲಿನ ನಗರದ ಮೊಗರ್ಪಣೆ ಬಳಿ ಜೂ.5 ರಂದು ಸ್ಕಾರ್ಪಿಯೋ ವಾಹನದಲ್ಲಿ ಬಂದು ಸುಳ್ಯ ಜಯನಗರದ ಮಹಮ್ಮದ್ ಶಾಹಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ ಮೂವರು ಆರೋಪಿಗಳನ್ನು ಗುರುವಾರ ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಸಂಪಾಜೆಯ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಗೊಂಡಿರುವ ಕುಶಾಲನಗರದ ಕೆ. ಜಯನ್ (38), ಆತನ ಗೆಳೆಯರಾದ ಮಡಿಕೇರಿಯ ವಿನೋದ್ (34) ಹಾಗೂ ಹೆಚ್.ಎಸ್. ಮನೋಜ್ (25) ಬಂಧಿತ ಆರೋಪಿಗಳು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ನಾಡ ಕೋವಿ ಮತ್ತು ಎರಡು ಸಜೀವ ತೋಟೆಗಳನ್ನು ಹಾಗೂ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮಹಮ್ಮದ್ ಸಾಯಿಯವರ ಮೇಲೆ ಅತೀ ಸಮೀಪದಿಂದ ಗುಂಡಿನ ದಾಳಿ ನಡೆಸಿದ್ದರೂ ಅದೃಷ್ಟವಶಾತ್ ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.
ಶಾಹಿಯ ಬೆನ್ನಿನ ಎಡ ಬದಿಗೆ ತಾಗಿ ಕಾರಿನ ಬಲ ಬದಿಗೆ ಗುಂಡು ತಗುಲಿತ್ತು.
ಶಾಹಿ ಹಾಗೂ ಆರೋಪಿ ಜಯನ್ ಒಂದು ಕಾಲಕ್ಕೆ ಮಿತ್ರರಾಗಿದ್ದು ಕೆಲವೊಂದು ವ್ಯವಹಾರದ ವಿಚಾರದಲ್ಲಿ ವೈಷಮ್ಯ ಉಂಟಾಗಿ ಈ ಕೊಲೆಯತ್ನ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Post a Comment