ಪಾಣಾಜೆ: ಶೈಕ್ಷಣಿಕ ವರ್ಷ 2022-2023 ನೇ ಸಾಲಿಗೆ ಸುಬೋಧ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತನ್ನು ರಚಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ಔಫ್ 10ನೇ ತರಗತಿ ಹಾಗೂ ಶಾಲಾ ವಿದ್ಯಾರ್ಥಿ ಉಪನಾಯಕಿಯಾಗಿ ಕು. ಕೀರ್ತನ 10 ನೇ ತರಗತಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಶಾಲಾ ವಿದ್ಯಾರ್ಥಿ ಸಂಸತ್ತಿಗೆ ನಡೆದ ಚುನಾವಣೆಯನ್ನು ಶಿಕ್ಷಕಿಯರಾದ ಶ್ರೀಮತಿ ನಿರ್ಮಲಾ ಹಾಗೂ ಶ್ರೀಮತಿ ವಿನುತಾ ಕುಮಾರಿ ನಡೆಸಿಕೊಟ್ಟರು.
ವಿದ್ಯಾರ್ಥಿ ಸಂಘದ ಇತರ ಸದಸ್ಯರಾಗಿ ನವ್ಯಶ್ರೀ (10ನೇ), ಮಧುಶ್ರೀ (9ನೇ), ತನುಶ್ರೀ (10ನೇ), ಮನ್ವಿತ್ (8ನೇ), ಕೃತಿಕಾ (10ನೇ), ನೆಬಿಸತುಲ್ ಫಾಸಿಲ (10ನೇ), ಚೇತನ್ (10ನೇ), ಅನುಪ್ರಿಯ (10ನೇ), ಪ್ರದೀಪ (20ನೇ), ತೇಜಸ್ (10ನೇ), ಮರಿಯಮ್ಮತ್ ಮಶ್ ಮೂಮ (10ನೇ), ಜಗತ್ ಎಸ್ ಕೆ (10ನೇ), ಸುಪ್ರೀತ(10ನೇ), ಫಾಯಿಝ (10ನೇ), ಅರ್ಪಿತ ಪಿ ಕೆ (10ನೇ) ಇವರನ್ನು ಆಯ್ಕೆ ಮಾಡಲಾಯಿತು.
ಹತ್ತನೇ ತರಗತಿಯ ಕುಮಾರಿ ಅರ್ಪಿತಾ ಪಿ ಕೆ ಹಾಗೂ ಒಂಬತ್ತನೇ ತರಗತಿಯ ದೀಪಿಕಾ ಅವರು ಶಾಲಾ ಸಂಸತ್ತಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು.
ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment