ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗುರಿ ಮುಟ್ಟುವುದು ಅಸಾಧ್ಯವಲ್ಲ: ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ ವತಿಯಿಂದ ಪ್ರೇರಣಾ ಶಿಬಿರ

ಗುರಿ ಮುಟ್ಟುವುದು ಅಸಾಧ್ಯವಲ್ಲ: ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ ವತಿಯಿಂದ ಪ್ರೇರಣಾ ಶಿಬಿರ


ಮಂಗಳೂರು: ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ, ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಯೋಜಿಸುತ್ತಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ “ಗುರಿ ಮುಟ್ಟುವುದು ಅಸಾಧ್ಯವಲ್ಲ! ಎನ್ನುವ ಪ್ರೇರಣಾ ಕಾರ್ಯಕ್ರಮವು ಇತ್ತೀಚೆಗೆ ಕೆನರಾ ಪ್ರೌಢ ಶಾಲೆ ಹಾಗೂ ಕೆನರಾ ಹಿರಿಯ ಪ್ರಾಥಮಿಕ ಶಾಲೆ ಉರ್ವಾದ ಸಹಯೋಗದೊಂದಿಗೆ ನಡೆಯಿತು. 


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಾಗ್ಮಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಆಗಮಿಸಿದ್ದರು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಸುಧಾ ಶೆಣೈ ಯವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.


ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಶ್ರೀ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನರೇಶ್ ಶೆಣೈ ಹಾಗೂ ಆಡಳಿತ ಮಂಡಳಿಯ ಜನ ಸಂಪರ್ಕ ಅಧಿಕಾರಿ ಶ್ರೀಮತಿ ಉಜ್ವಲಾ ಮಲ್ಯ ರವರು ಉಪಸ್ಥಿತರಿದ್ದರು. ಕೆನರಾ ಶಾಲೆ ಉರ್ವ ಇಲ್ಲಿಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ನವಿತಾ ಪ್ರಕಾಶ್ ಹಾಗೂ ಶ್ರೀಮತಿ ಲಲನಾ ಜೆ. ಶೆಣೈಯವರು ಉಪಸ್ಥಿತರಿದ್ದರು.


6 ರಿಂದ 10 ನೇ ತರಗತಿಯ ಸುಮಾರು 700ಮಂದಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಸುಂದರ ಪೌರಾಣಿಕ ಕಥೆಗಳ ಮೂಲಕ ಮಕ್ಕಳ ಮನಸ್ಸನ್ನು ಮನದಟ್ಟು ಮಾಡಿದರು.


ಮನಸ್ಸನ್ನು ಹತೋಟಿಯಲ್ಲಿಡುವ ಕೆಲವು ಸರಳ ತಂತ್ರಗಳನ್ನು ಸೂಚಿಸಿದರು. ವ್ಯಕ್ತಿಗೆ ಸಿಗುವ ಆತ್ಮ ತೃಪ್ತಿಯೇ ನಿಜವಾದ ಯಶಸ್ಸು, ಜೀವನದಲ್ಲಿ ಪ್ರಯತ್ನ ಮುಖ್ಯ, ಗುರಿಮುಟ್ಟುವ ವರೆಗೆ ಶ್ರಮಿಸುತ್ತಿರಿ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಸ್ಪಷ್ಟ ಗುರಿಯನ್ನು ವಿದ್ಯಾರ್ಥಿಗಳು ಹೊಂದಿದ್ದು, ಅದನ್ನು ಎಲ್ಲರೂ ಸಾಧಿಸುವಂತಾಗಲಿ ಎಂದು ಆಶಿಸಿದರು. ಈ ಕಾರ್ಯಕ್ರಮವು ಶ್ರೀಮತಿ ರೂಪಾ. ಎಂ ಇವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post