ಪಣಜಿ: ಉತ್ತರ ಗೋವಾದ ಅರಂಬೋಲ್ ಬೀಚ್‍ನಲ್ಲಿ ಬ್ರಿಟನ್ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ವಿನ್ಸೆಂಟ್ ಡಿಸೋನಾ (32) ಎಂಬ ವ್ಯಕ್ತಿಯನ್ನು ಗೋವಾ ಪೋಲಿಸರು ಬಂಧಿಸಿದ್ದಾರೆ.
ಈ ವಿದೇಶಿ ಮಹಿಳೆಗೆ ಮಸಾಜ್ ಮಾಡುವ ನೆಪದಲ್ಲಿ ಆರೋಪಿ ವಿನ್ಸೆಂಟ್ ಡಿಸೋಜಾ ಈತನು ತನ್ನ ಸಂಗಾತಿಯ ಎದುರೇ ಅತ್ಯಾಚಾರವೆಸಗಿ ಅಮಾನವೀಯತೆ ಮೆರೆದಿದ್ದಾನೆ ಎನ್ನಲಾಗಿದೆ.
ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ಥೆ ನೀಡಿರುವ ದೂರಿನ ಪ್ರಕಾರ ಜೂನ್ 2 ರಂದು ರಾತ್ರಿ 11 ಗಂಟೆಯ ಸುಮಾರು ಬೀಚ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಂತ್ರಸ್ಥೆಯು ಸೋಮವಾರ ಪೋಲಿಸರಿಗೆ ಅಧೀಕೃತ ದೂರು ನೀಡಿದ್ದಳು.
ದೂರು ದಾಖಲಿಸಿಕೊಂಡ ಪೆಡ್ನೆ ಪೋಲಿಸರು ಇನ್ಸಪೆಕ್ಟರ್ ವಿಕ್ರಮ್ ನಾಯ್ಕ ರವರ ಮಾರ್ಗದರ್ಶನದಲ್ಲಿ ಉಪ ಪೋಲಿಸ್ ಅಧೀಕ್ಷಕ ಸಿದ್ದಾಂತ ಶಿರೋಡ್ಕರ್ ರವರ ನೇತೃತ್ವದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment