ಕುಣಿಗಲ್ : ಗ್ಯಾಸ್ ಲಾರಿ ಹಾಗೂ, ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯೊಂದು ತಾಲೂಕಿನ ಎಡಿಯೂರು ಹೋಬಳಿ ಆಲಪ್ಪನಗುಡ್ಡೆ ಸಮೀಪ ಬುಧವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಎಡಿಯೂರು ಹೋಬಳಿ ಮಾಗಡಿಪಾಳ್ಯ ಗ್ರಾಮದ ಕಿಚ್ಚನ ಹಳ್ಳಿಮನೆ ಹೋಟೆಲ್ ನ ಮ್ಯಾನೇಜರ್ ಮಂಜುನಾಥ್ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ
ಮಂಜುನಾಥ್ ಕುಣಿಗಲ್ ಕಡೆಯಿಂದ ಕಿಚ್ಚನ ಹಳ್ಳಿಮನೆ ಕಡೆಗೆ ಬೈಕ್ ನಲ್ಲಿ ಹೊಗುತ್ತಿದ್ದಾಗ ಎಡಿಯೂರು ಕಡೆಯಿಂದ ಕುಣಿಗಲ್ ಕಡೆಗೆ ಬರುತ್ತಿದ್ದ ಗ್ಯಾಸ್ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ.
ಅಪಘಾತ ದಲ್ಲಿ ಬೈಕ್ ಸವಾರ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
Post a Comment