ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಜಾಲ್ ಪಕ್ಕಲಡ್ಕದಲ್ಲಿ ಪರಿಸರ ದಿನಾಚರಣೆ

ಬಜಾಲ್ ಪಕ್ಕಲಡ್ಕದಲ್ಲಿ ಪರಿಸರ ದಿನಾಚರಣೆ


ಪಕ್ಕಲಡ್ಕ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಮಾಅತ್ ಇಸ್ಲಾಮಿ ಹಿಂದ್ ಪಕ್ಕಲಡ್ಕ ವರ್ತುಲವು ಸಸಿ ನೆಡುವ ಕಾರ್ಯಕ್ರಮವನ್ನು ಪಕ್ಕಲಡ್ಕ ಪರಿಸರದಲ್ಲಿ ಹಮ್ಮಿಕೊಂಡಿತ್ತು ಈ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾಕ್ಟರ್ ಸುರೇಶ್ ನೆಗಳಗುಳಿ ಭಾಗವಹಿಸಿ ಪ್ರತಿಯೊಬ್ಬರೂ ಪರಿಸರದ ಮಹತ್ವ ಅರಿತು ಸ್ವಸ್ಥ ಪರಿಸರ ಉಳಿಸಿ ಬೆಳೆಸಲು ಪ್ರಯತ್ನ ಪಡಬೇಕು ಎಂಬುದನ್ನು ವಿವರಿಸಿದರು.


ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಅಧೀಕ್ಷಕರು ಮಾನಸ ಗಂಗೋತ್ರಿ, ಕೊಣಾಜೆ ಹರೀಶ್ ಕುಮಾರ್ ಕುಡ್ತಾಡ್ಕ ಮಾತಾಡಿ ಮನಸ್ಸು ಸ್ವಚ್ಚವಾಗಿದ್ದರೆ ಮಾತ್ರ ಪರಿಸರ ಸ್ವಚ್ಚತೆ ಆದ್ಯತೆ ಕೊಡಲು ಸಾದ್ಯ ಎನ್ನುವಂತಹ ಸಂದರ್ಭೋಚಿತ ಹಿತ ನುಡಿಯನ್ನು ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಅಬ್ದುಲ್ ಖಾದರ್ ಪಕ್ಕಲಡ್ಕ ಮತ್ತು ಜಮಾಅತ್ ಇಸ್ಲಾಮಿ ಹಿಂದ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 80 ಕ್ಕಿಂತ ಹೆಚ್ಚು ಸಸಿಯನ್ನು ಈ ಸಂದರ್ಭದಲ್ಲಿ ನೆಡಲಾಯಿತು.

-ಡಾ ಸುರೇಶ ನೆಗಳಗುಳಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post