ತಿರುಪತಿ: ತಿರುಮಲ ತಿಮ್ಮಪ್ಪನಿಗೆ ಭಕ್ತೆಯೊಬ್ಬರು ಅಪಾರ ದೇಣಿಗೆ ನೀಡಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ನೋಡಲು ಸಾಮಾನ್ಯವಾಗಿರುವ ತಮಿಳುನಾಡಿನ ಚೆನ್ನೈ ಮೂಲದ ವೃದ್ಧೆ ಭಕ್ತೆ ಸರೋಜಾ ಸೂರ್ಯ ನಾರಾಯಣನ್ ಅವರು ಈ ಅಪಾರ ದೇಣಿಗೆ ನೀಡಿದ್ದಾರೆ.
ವೆಂಕಟೇಶ್ವರಸ್ವಾಮಿಗೆ ಚಿನ್ನದ ಕಾಸುಲಾ ಹಾರ ಮತ್ತು ಯಜ್ಞೋಪವೀತವನ್ನು ಕಾಣಿಕೆಯಾಗಿ ಭಕ್ತೆ ಸರೋಜಾ ಅವರು ನೀಡಿದ್ದಾರೆ.
ಗುರುವಾರ ಸಂಜೆ 4.150 ಕೆಜಿ ತೂಕದ ಚಿನ್ನಾಭರಣವನ್ನು ಸರೋಜಾ ಸೂರ್ಯನಾರಾಯಣನ್ ಅವರು ಟಿಟಿಡಿ ಇಒ ಧರ್ಮರೆಡ್ಡಿ ಅವರಿಗೆ ಹಸ್ತಾಂತರಿಸಿದರು. ಆಭರಣಗಳ ಮೌಲ್ಯ 2.45 ಕೋಟಿ ರೂಪಾಯಿ ಎಂದು ದಾನಿ ತಿಳಿಸಿದ್ದಾರೆ.
Post a Comment