ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ||ಮುರಲೀ ಮೋಹನ್ ಚೂಂತಾರು ಅವರು ಇಂದು (ಮೇ 1) ವಿಟ್ಲ ಘಟಕಕ್ಕೆ ಭೇಟಿ ನೀಡಿ, ಇತ್ತೀಚಿಗೆ ನಿಧನರಾದ ವಿಟ್ಲ ಘಟಕದ ಗೃಹರಕ್ಷಕ ಪ್ರಕಾಶ್ ಅವರ ಪತ್ನಿ ಸೌಮ್ಯ ಅವರಿಗೆ ಗೃಹರಕ್ಷಕದಳದ ಕ್ಷೇಮಾಭಿವೃದ್ಧಿ ನಿಧಿಯಿಂದ ಸರಕಾರದಿಂದ ಮಂಜೂರಾದ ರೂ.15,000/- ಸಹಾಯಧನದ ಚೆಕ್ ಅನ್ನು ಹಸ್ತಾಂತರಿಸಿದರು.
ಮುಂದಿನ ದಿನಗಳಲ್ಲಿ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಸಮಾದೇಷ್ಟರು ನುಡಿದರು. ಈ ಸಂಧರ್ಭದಲ್ಲಿ ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ, ದಿ. ಪ್ರಕಾಶ್ ಅವರ ಅಣ್ಣ ಸದಾಶಿವ, ಹಿರಿಯ ಗೃಹರಕ್ಷಕರಾದ ಜಾನ್ ಲೂವೀಸ್, ಉಮೇಶ್, ಜಯಂತ್ ನಾಯಕ್, ಪುರಂದರ, ದೀಪಕ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment