ದತ್ತನಗರ ನಿವಾಸಿಗಳ ಸಂಘದ ವಾರ್ಷಿಕೋತ್ಸವ
ಬಿಕರ್ನಕಟ್ಟೆ: ಬಡಾವಣೆಗಳಲ್ಲಿ ಇರುವ ಕುಟುಂಬಗಳ ನಡುವೆ ಪರಸ್ಪರ ಐಕ್ಯತೆ ಇದ್ದಾಗ ಕೌಟುಂಬಿಕ ವಾತಾವಣದ ಜತೆ ಜತೆಗೆ ಒಗ್ಗಟ್ಟು ಬೆಳೆಯುತ್ತದೆ.ದತ್ತನಗರ ನಿವಾಸಿಗಳ ಸಂಘ ಈ ನಿಟ್ಟಿನಲ್ಲಿ ಮಾದರಿ ಸಂಘ ರಚಿಸಿಕೊಂಡಿದೆ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಬಿಕರ್ನಕಟ್ಟೆ ಸಮೀಪದ ದತ್ತನಗರದಲ್ಲಿ ಇಲ್ಲಿನ ನಿವಾಸಿಗಳ ಸಂಘದ ವತಿಯಿಂದ ದತ್ತನಗರ ಬಯಲು ರಂಗ ಮಂದಿರದಲ್ಲಿ ಶನಿವಾರ (ಮೇ 28) ನಡೆದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಮಹತ್ತರ ಬದಲಾವಣೆ ಆಗುತ್ತಿದೆ. ಕಳೆದುಕೊಂಡದ್ದನ್ನು ಮರಳಿ ಗಳಿಸುತ್ತಿದ್ದೇವೆ. ದೇಶದಲ್ಲಿ ಎಲ್ಲೆಡೆ ಶಿವ ಆರಾಧನೆ ನಡೆಯುತ್ತಿದೆ ಎಂದು ಮಾರ್ಮಿಕವಾಗಿ ನುಡಿದರಲ್ಲದೆ ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡುವ ವಾತಾವರಣ ಸೃಷ್ಠಿಯಾಗಿದೆ ಎಂದು ನುಡಿದರು.
ದತ್ತನಗರದ ನಿವಾಸಿಗಳ ಸಂಘವು ಸ್ಥಳೀಯವಾಗಿ ಬಡಾವಣೆಗೆ ಬೇಕಾದ ಮೂಲ ಸೌಲಭ್ಯವನ್ನು ತಾವಾಗಿಯೇ ಒದಗಿಸುತ್ತಾ, ಜನಪ್ರತಿನಿ„ಗಳ ಗಮನ ಸೆಳೆದು ಉತ್ತಮ ಬಡಾವಣೆಯನ್ನು ರಚಿಸಿ ಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕಂಬಳದಲ್ಲಿನ ಐತಿಹಾಸಿಕ ಸಾಧನೆನೆಗೈದ ಕೋಣದ ಜೋಡಿಗಳಿಗೆ ಸಮ್ಮಾನಿಸಿ ಕಂಬ್ಳದ ಮೇಲಿರುವ ಅದರ ಯಜಮಾನರ ಮೇಲಿರುವ ಪ್ರೀತಿಯನ್ನು ತೋರಿಸಿದ್ದಾರೆ. ಇಂತಹ ಸಂಘಗಳು ಎಲ್ಲೆಡೆ ಬೆಳೆದು ಬರಲಿ ಎಂದು ನುಡಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದತ್ತನಗರದಲ್ಲಿ ಕಾಂಕ್ರಿಟ್ ರಸ್ತೆಯನ್ನು ಮಾಡುವ ಉದ್ದೇಶದಿಂದ ನಿವಾಸಿಗಳು ಮನವಿ ಸಲ್ಲಿಸಿದ್ದು 1.50 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಸಂಘದ ಅಧ್ಯಕ್ಷ ವಿನಯ್ ಕುಮಾರ್ ತಾಳಿಂಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪದವು ಕಾನಡ್ಕ ಅಂತ ಹೆಸರು ಪಡೆದ ಈ ವಿಭಾಗದ ಯಶಸ್ವಿ ಕಂಬ್ಳ ಕೋಣ ಜೋಡಿಯಾದ ಧೂಜ, ಹೆರ್ಮುಂಡೆ ಮೋಡ ಜೋಡಿಯನ್ನು ಯಜಮಾನ ರಾಲ್ಫಿ ಡಿಸೋಜ ಸಮ್ಮುಖ ವಿಶೇಷವಾಗಿ ಸಮ್ಮಾನಿಸಲಾಯಿತು. ಮುಖ್ಯಶಿಕ್ಷಕಿಯಾಗಿ ಕರ್ತವ್ಯದಲ್ಲಿರುವ ವಿಜಯಕುಮಾರಿ, ಕ್ರೀಡಾ ಕ್ಷೇತ್ರದ ಸಾಧಕ ಜಗದೀಶ್ ಸೇಮಿತ, ಕಲಾವಿದ ವಿಜಯಕುಮಾರ್ ಕೊಡಿಯಾಲಬೈಲ್, ಸೇರಿದಂತೆ ಶಿಕ್ಷಣದಲ್ಲಿ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ಧರ್ಮಪತ್ನಿ ಡಾ.ಕಮಲಾ ದೇವಿ, ಸೈಂಟ್ ಎಲೋಷಿಯಸ್ ಕಾಲೇಜಿನ ಉಪನ್ಯಾಸಕ ಡಾ. ಕೆ.ಮಹಾಲಿಂಗ ಭಟ್, ಮನಪಾ ಸದಸ್ಯರಾದ ವನಿತ ಪ್ರಸಾದ್, ಕೋಶಾಧಿಕಾರಿ ರಾಜಗೋಪಾಲ್ ಭಟ್, ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ನಿವೃತ್ತ ಸಿಇಒ ನರೇಂದ್ರ, ಅನಂತ ಗೋವಿಂದ ಶರ್ಮ, ಕರುಣಾಕರ ಶೆಟ್ಟಿ, ವಿಜಯಕುಮಾರ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಸಂಚಾಲಕ ಪುರುಷೋತ್ತಮ್ ಎಚ್.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದತ್ತನರ ನಿವಾಸಿಗಳ ಸಂಘದ ಪ್ರ.ಕಾ ಹರೀಶ್ ಗೌಡ ವರದಿ ವಾಚಿಸಿದರು.ಸಂಘದ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಿವಾಸಿಗಳ ಸಂಘದ ಸದಸ್ಯರಿಂದ ಗಾಯನ, ನೃತ್ಯ, ನಾಟಕ ಕಾರ್ಯಕ್ರಮ ಜರಗಿತು.
Post a Comment