ಪುತ್ತೂರು: ನಗರದ ಮುರ ನಿವಾಸಿ ಗೋಪಾಲಕೃಷ್ಣಯ್ಯ ಬಿ (70) ಅಲ್ಪಕಾಲದ ಅಸೌಖ್ಯದಿಂದ ಮೇ.7ರಂದು ನಿಧನರಾಗಿದ್ದಾರೆ. ಮೂಲತಃ ಪಂಜದ ಭೀಮಗುಳಿಯವರಾದ ಇವರು ಪುತ್ತೂರಿನ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿ ನಾಲ್ಕು ದಶಕಗಳಿಗೂ ಮೀರಿ ಸೇವೆ ಸಲ್ಲಿಸಿದ್ದಾರೆ.
ಅಸೌಖ್ಯದಿಂದಾಗಿ ಆಸ್ಪತ್ರೆ ಸೇರುವ ಹಿಂದಿನದಿನದವರೆಗೂ ವೃತ್ತಿಯನ್ನು ನಡೆಸಿರುವುದು ಗಮನಾರ್ಹ. ಇವರು ಪತ್ನಿ ಲಕ್ಷ್ಮೀ, ಪುತ್ರ ರಾಘವೇಂದ್ರ, ಪುತ್ರಿ ಸಂಧ್ಯಾ, ಅಳಿಯ ನವನೀತ, ಮೊಮ್ಮಗ ವಿಹಾನ್ ಹಾಗೂ ಅಪಾರ ಬಂಧುಬಳಗ, ಅಭಿಮಾನಿ ವೃಂದವನ್ನು ಅಗಲಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment