ಬಂಟ್ವಾಳ: ತಾಲ್ಲೂಕಿನಲ್ಲಿ 61 ವರ್ಷಗಳ ಹಿಂದೆ ಆರಂಭಗೊಂಡಿರುವ ವಗ್ಗ ಕಾವಳಪಡೂರು ಕೃಷಿ ಪತ್ತಿನ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ 241 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ 1.69 ಕೋಟಿ ಲಾಭ ಗಳಿಸುವ ಮೂಲಕ ರೈತರಿಗೆ ಶೇ 15ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಮುಂದಿನ ವರ್ಷದೊಳಗೆ ರೂ 2 ಕೋಟಿ ವೆಚ್ಚದಲ್ಲಿ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಸಹಿತ ರೂ 48 ಲಕ್ಷ ವೆಚ್ಚದಲ್ಲಿ ಪ್ರತ್ಯೇಕ ಗೋದಾಮು ನಿರ್ಮಿಸಿ ಸಂಘದ 2 ಸಾವಿರ ಮಂದಿ ಸದಸ್ಯ ರೈತರಿಗೆ ಪಡಿತರ ಮತ್ತು ರಸಗೊಬ್ಬರ ವಿತರಣೆಗೆ ಅನುಕೂಲವಾಗಲಿದೆ ಎಂದು ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಹೇಳಿದ್ದಾರೆ.
ಇಲ್ಲಿನ ವಗ್ಗ ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸೋಮವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರಿಗೆ ರೂ 40.14 ಕೋಟಿ ಸಾಲ ವಿತರಿಸಲಾಗಿದ್ದು ಶೇ 98ರಷ್ಟು ಸಾಲ ವಸೂಲಾತಿಯಾಗಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಾನಂದ ಗಟ್ಟಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, 15 ಸೆಂಟ್ಸ್ ಮೇಲ್ಪಟ್ಟು ಜಮೀನು ಹೊಂದಿರುವ ರೈತರು ಕಿಸಾನ್ ಕಾರ್ಡ್ ಮಾಡುವ ಮೂಲಕ ಕಡಿಮೆ ಬಡ್ಡಿದರದ ಸಾಲ ಪಡೆಯಲು ಸಾಧ್ಯವಿದೆ ಎಂದರು.
ಸಂಘದ ಉಪಾಧ್ಯಕ್ಷ ಪಿ.ಅಮ್ಮು ರೈ, ನಿರ್ದೇಶಕರಾದ ಪಿ.ಜಿನರಾಜ ಅರಿಗ, ಕೆ.ಚಂದಪ್ಪ ಪೂಜಾರಿ, ಕೆ. ಪೋಂಕ್ರ, ಬೆನಡಿಕ್ಟ್ ಡಿಸೋಜ, ಬಿ .ಶಿವಪ್ರಸಾದ್, ವೇದಾವತಿ ಪ್ರಭು, ಸವಿತಾ ಬಿ.ಎಸ್., ರಾಮಣ್ಣ ನಾಯ್ಕ, ಗಂಗಾಧರ ಪೂಜಾರಿ, ವಿಜಯ ಪೂಜಾರಿ, ಚಂದಪ್ಪ ಮೂಲ್ಯ, ಲಕ್ಷ್ಮೀನಾರಾಯಣ ಶರ್ಮ ಮತ್ತಿತರರು ಇದ್ದರು.
ಇದೇ ವೇಳೆ ಗರಿಷ್ಟ ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ 'ಬೆಳೆ ವಿಮೆ' ಬಗ್ಗೆ ಮಾಹಿತಿ ನೀಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment