ಕುಂಬಳೆ: ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದ ಈ ಬಾರಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ 'ಸ್ಪಂದನ' ಇಂದು (ಮೇ 3) ಪೂರ್ವಾಹ್ನ ಹತ್ತು ಗಂಟೆಯಿಂದ ಹನ್ನೆರಡು ಗಂಟೆ ತನಕ ಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳ ವಿವಿಧ ಚಟುವಟಿಕೆಯಿಂದ ನೆರವೇರಿತು.
ಸಭಾ ಕಾರ್ಯಕ್ರಮದಲ್ಲಿ- ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಎನ್ ರಾವ್ ಮುನ್ನಿಪ್ಪಾಡಿ ಇವರು ಸಮಯಕ್ಕೆ ಆಧ್ಯತೆ ನೀಡಬೇಕಾದ ಕಿವಿಮಾತು ಹೇಳಿದರು.
ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ಪುರುಷೋತ್ತಮಾಚಾರ್ಯರು, ಸಂಸ್ಕಾರವಂತರಾಗಬೇಕು, ಎಂಬ ಸಲಹೆಯೊಂದಿಗೆ ಕತೆ ಸಹಿತ ಒಳ್ಳೆಯ ಶುಭಾಶಯಗಳನ್ನು ತಿಳಿಸಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸುಕುಮಾರ ಬೆಟ್ಟಂಪಾಡಿ ಮಕ್ಕಳಿಗೆ ಹಿತವಚನ ಸಲಹೆಯಿತ್ತರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಂಭಟ್ ದರ್ಭೆಮಾರ್ಗ ಅವರು ಮಾತನಾಡಿ, ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಸ್ಪಂಧಿಸಬೇಕು. ನಿಮ್ಮನ್ನು ಕಳುಹಿಸಿ ಕೊಡುವುದಲ್ಲ, ಎಂಬ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶ ತಿಳಿಸಿದರು.
ಅಧ್ಯಾಪಿಕೆ ಶ್ರೀಮತಿ ಚಿತ್ರಾ ಸರಸ್ವತಿ ಮಕ್ಕಳ ಸ್ಥಾನವನ್ನು ಮೇಲಕ್ಕೇರಿಸುವ ಅರ್ಥ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶ,ಮಕ್ಕಳು ಮುಂದೆಯೂ ಶಾಲೆಯ ಬಗ್ಗೆ ವಹಿಸಬೇಕಾದ ಕಾಳಜಿ ತಿಳಿಸಿದರು.
ಗ್ರಂಥಪಾಲಿಕೆ ವಿಜಯಾ ಸುಬ್ರಹ್ಮಣ್ಯ ಮಾತನಾಡುತ್ತಾ ನಿಮ್ಮ ರಿಸಲ್ಟ್ ಅತ್ಯುತ್ತಮವಾಗಿ ಬರಲಿ. ಮುಂದಿನ ಹಂತದಲ್ಲಿ ನೀವೂ ಈ ವಿದ್ಯಾಪೀಠದ ಪೋಷಕರು. ಆ ರೀತಿಯಲ್ಲಿ ಕಾರ್ಯಚಟುವಟಿಕೆಗಳಿರಲಿ ಎಂದರು.
ಎಸ್.ಎಸ್.ಎಲ್.ಸಿ ಯವರ ಕ್ಲಾಸ್ ಟೀಚರು ಶ್ರೀಮತಿ ಪ್ರತೀಕ್ಷಾ ಹಾಗೂ ಶ್ರೀಮತಿ ಉಮಾ ಟೀಚರು ಮಕ್ಕಳಿಗೆ ಶುಭಾಶಯ ಕೋರಿದರು.
ಮುಂದೆ ಗೋಡೆ ಗಡಿಯಾರ ಹಾಗೂ ಧ್ವನಿವರ್ಧಕ ಸೆಟ್ ಗಳನ್ನು ಎಸ್.ಎಸ್.ಎಲ್.ಸಿ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲೆಗೆ ನೆನಪಿನ ಕಾಣಿಕೆಯಿತ್ತರು. ಪ್ರಾರ್ಥನೆ ಹಾಗೂ ಸ್ವಾಗತ ಹತ್ತನೆ ವಿದ್ಯಾರ್ಥಿಗಳಿಂದ ನಡೆಯಿತು.
ಸುಮಧುರ ಸಮೂಹ ಗಾನ, ಹತ್ತನೆ ವಿದ್ಯಾರ್ಥಿನಿಯರಿಂದ ನೃತ್ಯ, ಹತ್ತನೆ ತರಗತಿ ಷಣ್ಮುಖನಿಂದ ಯಕ್ಷಗಾನ, ಹತ್ತನೆ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ 9ನೆ ತರಗತಿ ವರ್ಷಾ ಧನ್ಯವಾದವಿತ್ತಳು.
ವರದಿಃ- ವಿಜಯಾಸುಬ್ರಹ್ಮಣ್ಯ, ಕುಂಬಳೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment