ಸುಳ್ಯಪದವು: ಆಕಸ್ಮಿಕವಾಗಿ ಕಾಲು ಜಾರಿ ವಿದ್ಯಾರ್ಥಿ ಕೆರೆಗೆ ಬಿದ್ದು ಮೃತಪಟ್ಟ ಘಟನೆಯೊಂದು ಕನ್ನಡ್ಕದಲ್ಲಿ ನಡೆದಿದೆ.
ಪಡುವನ್ನೂರು ಗ್ರಾಮದ ಕೆಳಗಿನ ಕನ್ನಡ್ಕ ನಿವಾಸಿ ಧನುಷ್ (21) ಮೃತ ಯುವಕ. ಈತ ಪುತ್ತೂರು ಸರಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಸುಳ್ಯ ಪದವು ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿದ್ದು ಇತ್ತೀಚಿಗೆ ನಡೆದ ಜಾಗರಣ ವೇದಿಕೆಯ ನೂತನ ಸಮಿತಿಯಲ್ಲಿ ಯುವವಾಹಿನಿ ಸಂಘಟನೆಯ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದರು.
ಶುಕ್ರವಾರ ರಾತ್ರಿ ಒತ್ತೆಕೋಲ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿರುವಾಗ ಮನೆಯ ಸಮೀಪವಿರುವ ಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment