ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಭಿಮತ: ಬಟ್ಟೆಯಿಂದ ಶುರುವಾದ ಸಮಸ್ಯೆ ಹೊಟ್ಟೆಯ ತನಕ ಬಂದು ನಿಂತಿದೆ

ಅಭಿಮತ: ಬಟ್ಟೆಯಿಂದ ಶುರುವಾದ ಸಮಸ್ಯೆ ಹೊಟ್ಟೆಯ ತನಕ ಬಂದು ನಿಂತಿದೆ


ಇದು ಇನ್ನೆಲಿಗೆ ಹೇೂಗಿ ನಿಲ್ಲುತ್ತದೊ ಗೊತ್ತಿಲ್ಲ. ಇದು ಅಂತಿಂಥ ಕಥೆ ಅಲ್ಲ. ಈ ಕಥೆ ಶುರುವಾಗಿದ್ದು ಉಡುಪಿಯ ಸರಕಾರಿ ಶಾಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ. ಈ ಕಥೆಯನ್ನು ಅಲ್ಲಿಗೆ ಮುಗಿಸಿ ಬಿಡಬಹುದಿತ್ತು. ಆದರೆ ಇದರಲ್ಲಿ ನಾವು ಗೆದ್ದೆ ಬಿಡುತ್ತೇವೆ ಅನ್ನುವ ಹಠಮಾರಿ ತನದಿಂದಲೋ ಏನೇೂ, ಕೊರ್ಟಿನ ಮೆಟ್ಟಲು ಏರಿಯೇ ಬಿಟ್ಟಿತು ಬಟ್ಟೆಯ ಸಮಸ್ಯೆ. ಕೊನೆಗೂ ಕೇೂರ್ಟ್‌ ಹೇಳಿಯೇ ಬಿಡ್ತು- "ಬಟ್ಟೆ ಧರಿಸುವುದುಬಿಡುವುದು ಅವರವರ ಹಕ್ಕು ಆದರೆ ಶಾಲಾ ಕಾಲೇಜುಗಳಲ್ಲಿ ಶಿರ ವಸ್ತ್ರ ಧಾರಣೆ ಬೇಡ. "ಆದರೂ ಸಂವಿಧಾನ ನ್ಯಾಯಾಲಯದ ಪರಿಧಿಯನ್ನು ತಿಳಿಯದ ಮುಗ್ದ ಮಕ್ಕಳ ತಲೆಗೆ ಬೇಕು-ಬೇಡಗಳನ್ನು ತುಂಬಿಸಿ ಬಿಟ್ಟ ನಮ್ಮ ರಾಜಕಾರಣಿಗಳು. ಮತ್ತೆ ಅವರ ಪರವಾಗಿ ವಾದಿಸಲು ಶುರು ಮಾಡಿದರು. ಇದೇ ಹೊತ್ತಿನಲ್ಲಿ ಪರೀಕ್ಷೆಗಳು ನಡೆದು ಹಠಮಾರಿತನಕ್ಕೆ ಬಿದ್ದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಆಯುಷ್ಯವನ್ನೇ ಹಾಳುಮಾಡಿಕೊಂಡು ಬಿಟ್ಟರು.


ಇದೇ ಸಮಸ್ಯೆ ಮತ್ತೆ ಇನ್ನೊಂದು ವಿರಾಟ ರೂಪದಲ್ಲಿ ಬಂದು ನಿಂತಿದೆ. ಅದೂ ಕೂಡ ಹೊಟ್ಟೆಗೆ ಹೊಡೆಯುವ ಸವಾಲು. ಇದುವರೆಗೆ ನಾನು ಕೇಳದ ಪದಗಳ ಹೊಸ ಪರಿಚಯವಾಗಲು ಪ್ರಾರಂಭವಾಗಿದೆ. ಹಿಜಾಬ್,  ಹಲಾಲ್ ಕಟ್ಟ್, ಜಡ್ಕ ಕಟ್, ಈ ಪದಗಳ ಹಿಂದೆ ಬಹು ರೇೂಚಕವಾದ ಕಥೆಯೂ ಇದೆ ಅಂತೆ. ಒಂದು ದೇಶದ ಆಥಿ೯ಕ ವ್ಯವಸ್ಥೆಯನ್ನೇ ಹಾಳು ಮಾಡುವಷ್ಟು ತಾಕತ್ತು ಇರುವ ಹಲಾಲ್ ಲೇಬಲ್ ನಿಜಕ್ಕೂ ಭಯಾನಕವಾದ ರೇೂಚಕವಾದ ಕತೆ.


ಇದನ್ನೆಲ್ಲಾ ಕೇಳುವಾಗ ನಮ್ಮಮನೆಯ ತರಕಾರಿ ಕೇೂಳಿಯನ್ನು ನಾವೇ ಬೆಳೆದು ನಮ್ಮಮನೆಯಲ್ಲಿ  ಕತ್ತರಿಸಿ ತಿನ್ನುವುದೇ ಲೇಸು ಅನ್ನಿಸುತ್ತದೆ. ಹಿಂದು ಇರಲಿ ಮುಸ್ಲಿಂ ಇರಲಿ, ಇನ್ನಾವನೇ ಇರಲಿ ಅವರವರಿಗೆ ಇಷ್ಟವಾದ ರೀತಿಯಲ್ಲಿ ಆಹಾರವನ್ನು ಖರೀದಿಸಿ ತಿನ್ನುವ ಹಕ್ಕು ಸಂವಿಧಾನವೇ ನಮಗೆ ನೀಡಿದೆ ಅನ್ನುವಾಗ ಮತ್ತೆ ದಯಾಮಾಡಿ ಇದನ್ನು ಕೇೂಟ೯ಗೆ ತೆಗೆದು ಕೊಂಡು ಹೇೂಗುವ ಹಠ ಮಾರಿ ತನ ತೇೂರಿಸಬೇಡಿ. ಇದರಿಂದಾಗಿ ಬಟ್ಟೆಗೆ ಬಿದ್ದ ಛಡಿ ಏಟು ಮತ್ತೆ ಹೊಟ್ಟೆಗೆ ಬಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಅಂತೂ ನಮ್ಮ ರಾಜಕಾರಣಿಗಳು, ಅತಿ ಬುದ್ಧಿವಂತಿಕೆಯ ವಿಚಾರವಾದಿಗಳು ಸ್ವಲ್ಪ ಕಾಲ ಬಾಯಿ ಮುಚ್ಚಿ ಕುಳಿತುಕೊಂಡರೆ ಮಾತ್ರ "ಸವೇ೯ ಜನಾಃ ಸುಖಿನೇೂ ಭವಂತು..." ಪ್ರಾಪ್ತವಾಗಬಹುದು, ಅಲ್ವೇ?

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post