ಪುತ್ತೂರು: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಶ್ರೀ ಉಳ್ಳಾಲ್ತಿ ಮಹಿಳಾ ಮಂಡಲ(ರಿ) ಕಾರ್ಪಾಡಿ ವತಿಯಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಎಪ್ರಿಲ್ 29 ರಂದು ಕಾರ್ಪಾಡಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಉಧ್ಘಾಟನೆಯನ್ನು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘವೀರ್ ಸೂಟರ್ ಪೇಟೆ ದೀಪ ಬೆಳಗಿಸುವ ಮೂಲಕ ನೆರವೇರಿಸಿ, ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವು ಗ್ರಾಮೀಣ ಭಾಗದ ಮಹಿಳೆಯರಿಗೂ ಉತ್ತಮ ಪ್ರಯೋಜನಕಾರಿಯಾಗಿದ್ದು, ಇದನ್ನು ಇನ್ನೂ ಉತ್ತಮವಾಗಿ ಮುಂದುವರಿಸಿ ಉತ್ತಮ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷರಾದ ಶ್ರೀ ದಿನೇಶ್ ಸಾಲ್ಯಾನ್ ಅವರು ವಹಿಸಿ ಕಾರ್ಯಕ್ರಮ ಏರ್ಪಡಿಸಿದ ಮಹಿಳಾ ಮಂಡಲ ಕ್ಕೆ ಹಾಗೂ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಯುವ ಸಬಲೀಕರಣ ಕ್ರೀಡಾ ಇಲಾಖೆ ಇದರ ಮೇಲ್ವಿಚಾರಕರಾದ ಶ್ರೀಕಾಂತ್ ಪೂಜಾರಿ ಬಿರಾವು ಗ್ರಾಮೀಣ ಮಹಿಳೆಯರಿಗೂ ಈ ಒಂದು ಕಾರ್ಯಕ್ರಮ ಉತ್ತಮ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಇನ್ನೋರ್ವ ಅತಿಥಿಯಾದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಮೊಕ್ತೇಸರರಾದ ಶ್ರೀ ಸುಧಾಕರ ಭಟ್, ತಾಲೂಕು ಸಂಯೋಜಕರಾದ ಪ್ರಜ್ಞಾ ಕುಲಾಲ್ ಕಾವು, ಗೌತಮ್ ರಾಜ್ ಕರಂಬಾರು ಹಾಗೂ ದೈಹಿಕ ಶಿಕ್ಷಕರಾದ ಚಂದ್ರಕಲಾ ಇವರುಗಳು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಹಾಗೂ ವೇದಿಕೆಯಲ್ಲಿ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲದ ಕಾರ್ಯದರ್ಶಿ ಸಂದೀಪ್, ಶ್ರೀ ಉಳ್ಳಾಲ್ತಿ ಮಹಿಳಾ ಮಂಡಲದ ಅಧ್ಯಕ್ಷರಾದ ಅಂಬಿಕಾ ರಮೇಶ್, ಉಚಿತ ಹೊಲಿಗರ ತರಬೇತುದಾರರಾದ ಚಂದ್ರಕಲಾ,ಶ್ರೀ ಚಕ್ರರಾಜೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷರಾದ ನಳಿನಾಕ್ಷಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಚಿತ ಹೊಲಿಗೆ ತರಬೇತಿ ಪಡೆದ ಸದಸ್ಯರಿಗೆ ನೆಹರು ಯುವ ಕೇಂದ್ರ ಮಂಗಳೂರು ವತಿಯಿಂದ ಪ್ರಮಾಣಪತ್ರ ವನ್ನು ನೀಡಲಾಯಿತು.
ವನಿತಾ ಇವರು ಪ್ರಾರ್ಥಿಸಿ, ಉಷಾ ಎಸ್ ಆಳ್ವ ಸ್ವಾಗತಿಸಿ, ಆಶಾಲತಾ ಇವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಾಧುರಿ ಇವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಚಿತ ಹೊಲಿಗೆ ತರಬೇತಿದಾರರು, ಮಹಿಳಾ ಮಂಡಲದ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ಊರವರು ಭಾಗವಹಿಸಿದರು. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಹಿಳಾ ಮಂಡಲದ ವತಿಯಿಂದ ಆಯೋಜನೆ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment