ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ವಿಕ್ರಾಂತ್ ರೋಣ'ದ ಟೀಸರ್ ಯುಗಾದಿ ಹಬ್ಬವಾದ ಇಂದು ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಕಿಚ್ಚ ಸ್ಟೈಲಿಷ್ ಲುಕ್ ಜೊತೆಗೆ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶೇಷ ಅಂದ್ರೆ ಟೀಸರ್ ಬಿಡುಗಡೆ ಜೊತೆಗೆ ಸಿನಿಮಾ ರಿಲೀಸ್ ಡೇಟ್ ಕೂಡ ಬಹಿರಂಗ ವಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ತೆರೆಗೆ ಬರುತ್ತಿದೆ. ಟೀಸರ್ ಕೊನೆಯಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗ ಮಾಡುವ ಮೂಲಕ ಅಭಿಮಾನಿಗಳ ಸಂತಸ ಡಬಲ್ ಮಾಡಿದ್ದಾರೆ. ಯುಗಾದಿ ಹಬ್ಬಕ್ಕೆ ಕಿಚ್ಚನ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಸಿಕ್ಕಿದ್ದು ಫುಲ್ ಖುಷ್ ಆಗಿದ್ದಾರೆ.
Post a Comment