ಸಂತ ಏಕನಾಥ ಮಹಾರಾಜರ 19ನೇ ಪುಣ್ಯತಿಥಿ
ಬೆಂಗಳೂರು: ಬೆಳಗಾವಿ ಜಿಲ್ಲೆ ಯಮಕನಮರಡಿಯ ಹತ್ತರಗಿಯ ಶ್ರೀ ಹರಿಕಾಕ ಮಂದಿರದಲ್ಲಿ ಸಂತ ಏಕನಾಥ ಮಹಾರಾಜರ 19ನೇ ಪುಣ್ಯತಿಥಿ ನಿಮಿತ್ತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ– ಸಂಸ್ಕೃತ ಪಾಠಶಾಲೆ ಉದ್ಘಾಟನೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಹುಣಸಿಕೊಳ್ಳಮಠದ ಗುರು ರಾಜೋಟೇಶ್ವರ ಮಹಾಸ್ವಾಮಿಗಳು ಹಾಗು ಕಾರೀಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮ ಆಯೋಜಕರಾದ ಹತ್ತರಗಿ ಶ್ರೀಹರಿ ಮಂದಿರದ ಪೀಠಾಧ್ಯಕ್ಷರಾದ ಆನಂದ ಉರ್ಫ ನರಸಿಂಹ ಏಕನಾಥ ಗೋಸಾವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮಠವು ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಇರುವುದರಿಂದ ಎರಡೂ ರಾಜ್ಯದ ಭಕ್ತರ ಕಲ್ಪವೃಕ್ಷವಾಗಿದೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಸಂಸ್ಕೃತಿ ಚಿಂತಕ –ಅಂಕಣಕಾರ ಬೆಂಗಳೂರಿನ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರಿಗೆ ‘ವ್ಯಾಸ ಸಂಪದ ಪುರಸ್ಕಾರ’ ಹುಕ್ಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ರವರಿಗೆ ‘ಜ್ಞಾನ ವಿದ್ಯಾಗಿರಿ ‘ಪುರಸ್ಕಾರ, ಬೆಳಗಾವಿಯ ಮಹಿಳಾ ಅರ್ಚಕರಾದ ಭಾರತಿ ಈ ಕುಡಚಿಮಠರವರಿಗೆ ‘ಪುರೋಹಿತ ರತ್ನ' ಪುರಸ್ಕಾರ, ಯಮಕನಮರಡಿ ಪೋಲಿಸ್ ಠಾಣೆಯ ಸಿಪಿಐ ಆರ್.ಜಿ.ಛಾಯಾಗೋಳ- ಜನ ಸೇವಾ ಪುರಸ್ಕಾರ, ಪಿಎಸ್ಐ ಬಿ.ವಿ.ನ್ಯಾಮಗೌಡರ– ಬಸವ ಪುರಸ್ಕಾರ, ಪ್ರಾ.ಕ.ಪ ಸಂಘ ಅಧ್ಯಕ್ಷ ಸುಹಾಸ ಜೋಷಿ- ಸಹಕಾರ ರತ್ನ, ಹತ್ತರಗಿ ಗ್ರಾ.ಪಂ ಮಾಜಿ ಅಧ್ಯಕ್ಷ– ಹಾಲಿ ಸದಸ್ಯ ಮಹಾದೇವ ಪಟೋಳಿ- ಪ್ರಗತಿ ಪರ್ವ, ಹುಎಸಸಂನಿ ನಿರ್ದೇಶಕ ಸೋಮಲಿಂಗ ಪಟೋಳಿ – ಜ್ಯೋತಿ ಪುರಸ್ಕಾರ, ತಾ.ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಜಿ. ಅವಲಕ್ಕಿ –ಸಾಹಿತ್ಯ ಸುಮ, ಜಿಲ್ಲಾ ಕರವೇ ಉಪಾಧ್ಯಕ್ಷ ರಾಜು ನಾಶಿಪುಡಿ – ಕನ್ನಡ ಕಣ್ಮಣಿ , ಕೊಲ್ಲಾಪುರ ಮರಾಠಿ ಭಾಷಾ ಸಂವಾದಕ ಯುವರಾಜ ಕದಂ – ಮರಾಠಿ ಭಾಷಾ ಪುರಸ್ಕಾರ ಹಾಗು ಕಲಾವಿದ ಭರತ ಕಲಾಚಂದ್ರ- ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಠದ ಉಪಾಧ್ಯಕ್ಷರಾದ ಬೆಳಗಾವಿಯ ನ್ಯಾಯವಾದಿ ಎಸ್. ಎಂ. ಕುಲಕರ್ಣಿ ವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment