ಮಂಗಳೂರು: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317-ಡಿ ಲಯನ್ಸ್ ಮತ್ತು ಲಿಯೋ ಕ್ಲಬ್, ಕದ್ರಿ ಹಿಲ್ಸ್ MJF ಆಯೋಜಿಸುವ ಲಯನ್ಸ್ ರಂಗೋತ್ಸವ, ಕಲಕ ಪ್ರಶಸ್ತಿ ಪ್ರದಾನ ಸಮಾರಂಭ ಮೇ 1, ಸಂಜೆ ಘಂಟೆ 4.30ರಿಂದ ನಗರದ ಡಾನ್ ಬಾಸ್ಕೋಹಾಲ್ ನಲ್ಲಿ ನಡೆಯಲಿದೆ.
ಸಂಜೆ 4.30ಕ್ಕೆ ಮಂದಾರ (ರಿ) ಬ್ರಹ್ಮಾವರ ಇವರಿಂದ ಸಣ್ಣ ಕಥೆಗಳ ಆಧಾರಿತ ರಂಗ ರೂಪ ಸಂಕಥನದ ಪ್ರದರ್ಶನವಿದೆ. ನಿರ್ದೇಶನ- ರೋಹಿತ್ ಬೈಕಾಡಿ.
ಸಂಜೆ-5.00 ಕ್ಕೆ ನಾಟಕೋತ್ಸವ ಉದ್ಘಾಟನೆ/ಕಲಕ ಪ್ರಶಸ್ತಿ ಪ್ರದಾನ ನಡೆಯಲಿದೆ. ನಂತರ ರಂಗಭೂಮಿ (ರಿ), ಉಡುಪಿ ಇವರಿಂದ ನಾಟಕ ವಿಶಾಂಕೇ ಪ್ರದರ್ಶನಗೊಳ್ಳಲಿದೆ. ಈ ನಾಟಕದ ನಿರ್ದೇಶನ ಮಂಜುನಾಥ ಬಡಿಗೇರ ಅವರದ್ದು ಎಂದು ಅರೆಹೊಳೆ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment