ಹುಬ್ಬಳ್ಳಿ: ಐರಾವತ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ಹುಬ್ಬಳ್ಳಿ ತಾಲೂಕಿನ ಶಿರುಗುಪ್ಪಿ ಬಳಿ ನಡೆದಿದೆ.
ಹೈದರ್ ಬಾದ್ ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬಸ್ ಹಾಗೂ ಹುಬ್ಬಳ್ಳಿಯಿಂದ ಹಂಪಿ ಕಡೆಗೆ ಹೊರಟಿದ್ದ ಕಾರು ಶಿರುಗುಪ್ಪಿ ಬಳಿ ಮುಖಾಮುಖಿ ಡಿಕ್ಕಿಯಾಗಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಏಳು ಜನರಲ್ಲಿ ಇಬ್ಬರ ಸಾವನ್ನಪ್ಪಿದ್ದು, ಉಳಿದವರು ಗಂಭೀರ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಗಾಯಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
Post a Comment