ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗಕ್ಕೆ ಸಂವಿಧಾನಕ್ಕೆ ಗೌರವ ಮರ್ಯಾದೆ ನೀಡಬೇಕು. ಇದು ನಮ್ಮೆಲ್ಲರ ಕರ್ತವ್ಯ ಅನ್ನುವ ಬಾರಿ ದೊಡ್ಡ ಮಾತು ಕಾರ್ಯಾಂಗ ಶಾಸಕಾಂಗದಿಂದಲೂ ಜನರಿಗೆ ಬುದ್ಧಿ ಹೇಳುವ ಕೆಲಸ ಬಾರಿ ಕೇಳಿ ಬರುತ್ತಿದೆ. ಈ ಮಾತು ಸತ್ಯ ಆದರೆ ನಮ್ಮ ಶಾಸಕಾಂಗವಾಗಲಿ ಕಾರ್ಯಾಂಗವಾಗಲಿ ನ್ಯಾಯಾಂಗಕ್ಕೆ ಎಷ್ಟು ಮರ್ಯಾದೆ ನೀಡುತ್ತಿದೆ ಅನ್ನುವುದು ಮೊದಲು ಚರ್ಚೆಯಾಗಬೇಕಾದ ವಿಚಾರ.
ಸರ್ಕಾರದಿಂದ ಕಾರ್ಯ ಲೇೂಪವಾಗಿ ಒಬ್ಬ ಸಾಮಾನ್ಯ ವ್ಯಕ್ತಿ ನ್ಯಾಯಾಂಗಕ್ಕೆ ಹೇೂಗಿ ತೀರ್ಪು ಕೂಡಾ ಅವನ ಪರವಾಗಿ ಉಚ್ಚ ನ್ಯಾಯಾಂಗ ನೀಡಿದಾಗ ಕೂಡಾ ಅದನ್ನು ತ್ವರಿತವಾಗಿ ಕಾರ್ಯಗೊಳಿಸದೆ ನ್ಯಾಯಾಂಗ ನಿಂದನೆ ಬರುವ ತನಕ ಕಾದು ಅದರ ಮೇಲೆ ಇನ್ನೊಂದು ಮೊಕದ್ದಮೆ ಹೂಡುವ ತನಕ ಸಾಮಾನ್ಯ ಪ್ರಜೆಗಳನ್ನು ಪೀಡಿಸುವ ಕೆಲಸ. ಸರ್ಕಾರದಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಅಂತೂ ಕಕ್ಷಿಗಾರನಿಗೆ ಸುಲಭವಾಗಿ ನ್ಯಾಯ ಸಿಗಬಾರದು ಅನ್ನುವ ತಂತ್ರಗಾರಿಕೆಯನ್ನು ನಮ್ಮ ಅಧಿಕಾರಿಗಳು ಪ್ರದರ್ಶನ ಮಾಡುವುದು ಕೂಡ ನ್ಯಾಯಾಂಗಕ್ಕೆ ಅಗೌರವ ತೇೂರುವುದೇ ಆಗಿರುವುದಿಲ್ಲವೇ?
ಅದೇ ಕೇೂರ್ಟಿನ ತೀರ್ಪು ಸರ್ಕಾರದ ಪರವಾನಗಿ ಬಂದರೆ ರಾತ್ರಿ ಬೆಳಗಾಗುವುದರೊಳಗೆ ಕಕ್ಷಿಗಾರನಿಗೆ ಶಿಕ್ಷಿಸುವ ಕೆಲಸ ಸರ್ಕಾರಿ ವ್ಯವಸ್ಥೆ ಮಾಡಿಯೇ ಮಾಡುತ್ತದೆ. ಅಂದರೆ ಇವರಿಗೆ ನ್ಯಾಯಾಂಗದ ತೀರ್ಪುಗಳೆಂದರೆ ಅನುಕೂಲ ಶಾಸ್ತ್ರವೇ?
ಇತ್ತೀಚಿಗೆ ಸುಪ್ರೀಂ ಕೇೂರ್ಟಿನ ಮುಖ್ಯ ನ್ಯಾಯಾಧೀಶರಾದ ಎನ್.ವಿ. ರಮಣರವರು ಬಹು ಮುಖ್ಯವಾದ ಪ್ರಶ್ನೆ ಎತ್ತಿದ್ದಾರೆ "ಎಲ್ಲಾ ಕೆಲಸಗಳನ್ನು ನ್ಯಾಯಾಂಗವೇ ಮಾಡುವುದಾದರೆ ಶಾಸಕಾಂಗ ಕಾರ್ಯಾಂಗಗಳು ಯಾಕೆ ಬೇಕು? ಯಾವುದು ನ್ಯಾಯ; ಯಾವುದು ಅನ್ಯಾಯ, ಯಾವುದು ಮಾನವೀಯತೆ ಅನ್ನುವ ಸಾಮಾನ್ಯ ಪರಿ ಜ್ಞಾನ ಸರಕಾರಕ್ಕೆ ಬೇಡವೇ? ಅನ್ನುವ ಮೂಲಭೂತವಾದ ಪ್ರಶ್ನೆ ಮುಖ್ಯ ನ್ಯಾಯಾಧೀಶರು ಎತ್ತಿದ್ದಾರೆ. ಇದನ್ನು ಇಂದಿನ ಕಾಲ ಘಟದಲ್ಲಿ ಗಂಭೀರವಾಗಿ ಚಿಂತಿಸ ಬೇಕಾದ ವಿಚಾರ ಅಲ್ವೇ?
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment