ಅಮರಾವತಿ: ಹೊಲ ಉಳುಮೆ ಮಾಡಲು ಸಾಮಾನ್ಯವಾಗಿ ಎತ್ತು, ಎಮ್ಮೆ, ಕೋಣಗಳ ಬಳಕೆ ಮಾಡಲಾಗುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ರೈತರೊಬ್ಬರು ಎರಡು ಕುದುರೆಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಕುದುರೆಗಳನ್ನು ಖರೀದಿಸಿ ಸಾಕುತ್ತಿದ್ದ ರೈತ ಈಗ ಅದೇ ಕುದುರೆಗಳಿಗೆ ಹೊಲ ಉಳುಮೆ ತರಬೇತಿ ಕೊಟ್ಟು ಕೃಷಿ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದಾರೆ.
ಅಮರಾವತಿ ಜಿಲ್ಲೆಯ ವಾಸೀಂ ತಾಲೂಕಿನ ಶೆಲ್ಗಾಂವ್ ಘುಗೆ ಗ್ರಾಮದ ಕೃಷಿಕ ಬಾಬುರಾವ್ ಸೂರ್ಯಭಾನ್ ಧಂಗರ್ ಎಂಬುವವರು ಕೃಷಿ ಕಾರ್ಯಕ್ಕೆ ಈ ಅಶ್ವಗಳನ್ನು ಬಳಕೆ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟ್ರ್ಯಾಕ್ಟರ್ ಮೂಲಕ ಕೃಷಿ ಮಾಡುವುದು ತುಂಬಾ ದುಬಾರಿಯಾಗಿದೆ. ಅಲ್ಲದೇ, ಉಳುಮೆ ಅಗತ್ಯವಿರುವಾಗ ಟ್ರ್ಯಾಕ್ಟರ್ ಮಾಲೀಕರು ಸಮಯಕ್ಕೆ ಬರುವುದಿಲ್ಲ. ಆದ್ದರಿಂದ ರಾಜ ಮತ್ತು ತುಳಸಾ ಎಂಬ ಕುದುರೆಗಳಿಗೆ ಉಳುಮೆ ಮಾಡುವ ತರಬೇತಿ ಕೊಟ್ಟು ಅವುಗಳನ್ನು ಬಳಕೆ ಮಾಡುತ್ತಿದ್ದೇನೆ ಎಂದು ರೈತ ಬಾಬುರಾವ್ ತಿಳಿಸಿದ್ದಾರೆ.
Post a Comment