ಕಾಸರಗೋಡು: ಹಿರಿಯ ಸಾಹಿತಿ, ಅರ್ಥಧಾರಿ, ಕನ್ನಡಪರ ಹೋರಾಟಗಾರ ಡಾ| ರಮಾನಂದ ಬನಾರಿಯವರು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಅವರನ್ನು ಕಾರ್ಕಳದ ಕಾರ್ಯಾಲಯದಲ್ಲಿ ಭೇಟಿಯಾಗಿ “ಕಾಸರಗೋಡು ಸಮಸ್ಯೆ ಒಂದು ವಿಶ್ಲೇಷಣೆ” ಎನ್ನುವ ಇತ್ತೀಚೆಗಿನ ತನ್ನ ಕೃತಿಯನ್ನು ಗೌರವಪೂರ್ವಕ ನೀಡಿ ಅಭಿನಂದಿಸಿದರು.
ಈ ಕೃತಿಯಲ್ಲಿ ಸಮಸ್ಯೆಯ ಸಮಗ್ರ ಚಿತ್ರಣದೊಂದಿಗೆ ಸಕಾಲಿಕವಾಗಿ ಕೈಗೊಳ್ಳಬಹುದಾದ ಪರಿಹಾರ ಸೂತ್ರಗಳನ್ನು ತಾನು ವಿಶದವಾಗಿ ನಿರೂಪಿಸಿರುವೆನೆಂಬುದನ್ನು ಸಚಿವರ ಗಮನಕ್ಕೆ ತಂದ ಡಾ. ಬನಾರಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸೂತ್ರಗಳನ್ನು ವಿಮರ್ಶಿಸಿ ಅನುಷ್ಠಾನಕ್ಕೆ ತರಬೇಕೆಂದು ವಿನಂತಿಸಿಕೊಂಡರು.
ಸಚಿವರು ಸೌಹಾರ್ದದಿಂದ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಹರಿಶ್ಚಂದ್ರ ಮಂಜೇಶ್ವರ ಮತ್ತು ವಿಷ್ಣು ಶಶಾಂಕ ಮಂಜೇಶ್ವರ ಜೊತೆಗೂಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment