ಸುಳ್ಯ: ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯದ ಸಪ್ತಸ್ವರ ಸಂಗೀತ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಇತ್ತೀಚಿಗೆ ಅಗಲಿದ ಹಿರಿಯ ಸಾಹಿತಿಗಳು ವಿದ್ವಾನ್ ಟಿ ಜಿ ಮುಡೂರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಸಾಹಿತಿಗಳಾದ ಅನುರಾಧಾ ಶಿವಪ್ರಕಾಶ್, ಪರಿಮಳ ಐವರ್ನಾಡು, ಲತಾಶ್ರೀ ಸುಪ್ರೀತ್ ಮೊಂಟೆಡ್ಕ ನುಡಿನಮನ ಸಲ್ಲಿಸಿದರು. ಸಪ್ತಸ್ವರ ಸಂಗೀತ ತರಬೇತಿ ಕೇಂದ್ರದ ಸಂಚಾಲಕರಾದ ಅರುಣ್ ಜಾಧವ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯಕಾರಿಣಿ ಸದಸ್ಯರಾದ ಉಮೇಶ್ ಆಚಾರ್ಯ ಜಟ್ಟಿಪಳ್ಳ, ಮಾಸ್ಟರ್ ಸಾಯಿ ಪ್ರಶಾಂತ್, ಮತ್ತು ಕುಮಾರಿ ಸ್ನಿಗ್ಧ ಮೊಂಟೆಡ್ಕ ಉಪಸ್ಥಿರಿದ್ದರು. ದಿ|| ಟಿ ಜಿ ಮುಡೂರು (ತಮ್ಮಯ್ಯ ಗೌಡ ಮುಡೂರು) ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಗೌರವ ಅರ್ಪಿಸಲಾಯಿತು. ಕವಿ ಪೆರುಮಾಳ್ ಐವರ್ನಾಡು ಸ್ವಾಗತಿಸಿದರು. ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ್ ಕೋಳಿವಾಡ ರವರು ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment