ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಸು ಹಬ್ಬದ ಪ್ರಯುಕ್ತ ಬಹುಭಾಷಾ ಕವಿಗೋಷ್ಟಿ

ಬಿಸು ಹಬ್ಬದ ಪ್ರಯುಕ್ತ ಬಹುಭಾಷಾ ಕವಿಗೋಷ್ಟಿ


ಮಂಗಳೂರು: ಹೊಸ ವರ್ಷದ ಬಿಸು ಹಬ್ಬದ ಸಂದರ್ಭದಲ್ಲಿ ಕಥಾಬಿಂದು ಪ್ರಕಾಶನದ ಪಿ ವಿ ಪ್ರದೀಪ್ ಕುಮಾರ್ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಕವಿ ಗೋಷ್ಠಿಯನ್ನು ಆಯೋಜಿಸಲಾಯಿತು.


ಮುಖ್ಯ ಅತಿಥಿಗಳಾಗಿ ಸತ್ಯಶಾಂತಿ ಪ್ರಕಾಶನ ಸಂಸ್ಥೆ ಪುತ್ತೂರು ಇದರ ಅದ್ಯಕ್ಷರಾದ ಶಾಂತಾ ಕುಂಟಿನಿಯವರು ಮಾತನಾಡಿ, ಈ ಮನೆ ಮನೆ ಸಾಹಿತ್ಯ ಕಾರ್ಯಕ್ರಮಗಳನ್ನು ಕಡಿಮೆ ಖರ್ಚಿನಲ್ಲಿ ಆಯೋಜನೆ ಮಾಡುವುದು ಸರಿಯಾದ ಸಾಹಿತ್ಯ ಬೆಳವಣಿಗೆಯ ಒಂದು ರೀತಿ‌ ಎಂದು ಅಭಿನಂದಿಸಿದರು.


ಗಂಗಾಧರ್ ಗಾಂಧಿ ಮಾತನಾಡಿ, ಶಿಕ್ಷಣವನ್ನು ಧರ್ಮದ ಹೆಸರನ್ನು ಹೇಳಿ ಕುಂಠಿತ ಮಾಡುವ ಕ್ರಮ ಖಂಡಿಸಿದರು ‌ಹಾಗೂ‌ ಕಲಿತು ಆ ಶಿಕ್ಷಣದ ಮೂಲಕ ಈ ತಾರತಮ್ಯವನ್ನು ಪ್ರತಿಭಟಿಸಿ ಪರಿಣಾಮ  ಬರಬೇಕು ಎಂದು ಹಾರೈಸಿದರು.


ರಾಮ ಭಟ್ ಶುಭಾಶಯ ಕೋರಿದರು. ನಂತರ ನಡೆದ ಕವಿಗೋಷ್ಠಿಯನ್ನು ರಶ್ಮಿ ಸನಿಲ್ ನಿರ್ವಹಣೆ ಮಾಡಿದರು.

ಬಿಸುವಿನ ಬಗ್ಗೆ ನಡೆದ ಕವಿಗೋಷ್ಟಿಯಲ್ಲಿ ತುಳು ಭಾಷೆಯಲ್ಲಿ ರೇಮಂಡ್ ಡಿಕೂನಾ ತಾಕೊಡೆ, ಕನ್ನಡದಲ್ಲಿ ಮುಕ್ತಕಭರಿತ ಗಝಲ್ ಅನ್ನು ಡಾ ಸುರೇಶ ನೆಗಳಗುಳಿ, ಪರಿಮಳ ಮಹೇಶ್, ಶಾಂತ ಪುತ್ತೂರು, ರಶ್ಮಿ ಸನಿಲ್, ಶಾಂತ ಕುಂಟಿನಿ, ಗಂಗಾಧರ್ ಗಾಂಧಿ, ಪಂಕಜಾ ರಾಮ ಭಟ್, ಮಾನಸ ಪ್ರವೀಣ್ ಭಟ್ ಮುಂತಾದ ಕವಿಗಳು ವಾಚನ ಮಾಡಿದರು.


ಮೊದಲು ಪಿ ವಿ ಪ್ರದೀಪ್ ಕುಮಾರ್ ಸಾವಗತಿಸಿ ಸುನಿತಾ ಪ್ರದೀಪ್ ಕುಮಾರ್ ‌ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post