ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೋಟೋ ಶೂಟ್ ವೇಳೆ ಕಾಲು ಜಾರಿ ನದಿಗೆ ಬಿದ್ದ ನವ ದಂಪತಿ

ಪೋಟೋ ಶೂಟ್ ವೇಳೆ ಕಾಲು ಜಾರಿ ನದಿಗೆ ಬಿದ್ದ ನವ ದಂಪತಿ

 


ಕೊಚ್ಚಿ: ಹೊಸದಾಗಿ ಮದುವೆಯಾಗಿದ್ದ ಯುವಕ ಯುವತಿ ಕಾಲು ಜಾರಿ ನದಿಗೆ ಬಿದ್ದ ಘಟನೆಯೊಂದು ಕೇರಳದ ಕಡಿಯಂಗಾಡ್ ಎಂಬಲ್ಲಿ ನಡೆದಿದೆ.

ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು ಯುವತಿಯನ್ನು ರಕ್ಷಿಸಲಾಗಿದೆ.


ರೆಜಿಲಾಲ್ ಎಂಬಾತ ಮೃತ ಪಟ್ಟ ದುರ್ದೈವಿ. ಕೆಲ ದಿನಗಳ ಹಿಂದಷ್ಟೇ ಕುಟ್ಟಿಯಾಡಿ ನದಿಯ ತಟದಲ್ಲಿ ನಡೆದ ಫೋಟೊ ಶೂಟ್ ನಲ್ಲಿ ಇಬ್ಬರೂ ಭಾಗಿಯಾಗಿದ್ದರು.

ಮದುವೆ ನಂತರ ಮತ್ತೊಮ್ಮೆ ಆ ಸ್ಥಳಕ್ಕೆ ಭೇಟಿ ನೀಡಲು ನವದಂಪತಿ ಆಶಿಸಿದ್ದರು.


ಹೀಗಾಗಿ ನವದಂಪತಿ ತಮ್ಮ ಸಂಬಂಧಿಕರ ಜೊತೆ ಮುಂಜಾನೆ ಕುಟ್ಟಿಯಾಡಿ ನದಿ ಬಳಿಗೆ ತೆರಳಿದ್ದರು. ಈ ವೇಳೆ ಅಲ್ಲಿನ ಕಲ್ಲು ಬಂಡೆಯೊಂದರ ಮೇಲೆ ದಂಪತಿ ತೆರಳಿದ್ದರು. ಆಗ ಕಾಲು ಜಾರಿ ಇಬ್ಬರೂ ಬಿದ್ದಿದ್ದರು.


ಅದೇ ದಾರಿಯಲ್ಲಿ ಲಾರಿ ಚಾಲಕನೊಬ್ಬ ಬಂದಿದ್ದ. ಆತ ನದಿಗೆ ಹಾರಿ ಯುವತಿಯನ್ನು ರಕ್ಷಿಸಲು ಮುಂದಾದ ಆದರೆ ಯುವಕ ರೆಜಿಲಾಲ್ ಅಷ್ಟರಲ್ಲಾಗಲೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

0 Comments

Post a Comment

Post a Comment (0)

Previous Post Next Post