ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವಿತೆ ಬರೆದು 13 ವರ್ಷದ ಬಾಲಕಿ ಆತ್ಮಹತ್ಯೆ

ಕವಿತೆ ಬರೆದು 13 ವರ್ಷದ ಬಾಲಕಿ ಆತ್ಮಹತ್ಯೆ

 


ನಾಗ್ಪುರ: 13 ವರ್ಷದ ಬಾಲಕಿ ಸಾವಿನ ಬಗ್ಗೆ ಕವನಗಳು ಮತ್ತು ಉಲ್ಲೇಖಗಳನ್ನು ಬರೆದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.


ಅಜ್ನಿ ಪ್ರದೇಶದ ಚಂದ್ರಮಣಿ ನಗರದ ನಿವಾಸಿಯಾಗಿದ್ದ ಬಾಲಕಿ 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.


ಸೋಮವಾರ ಮಧ್ಯಾಹ್ನ 1 ಗಂಟೆಗೆ ಬಾಲಕಿಯ ತಾಯಿ ಬಾತ್‍ ರೂಮ್‍ ನಲ್ಲಿದ್ದಾಗ ಮತ್ತು ಆಕೆಯ ಸಹೋದರ ಡ್ರಾಯಿಂಗ್ ರೂಮ್‍ ನಲ್ಲಿದ್ದಾಗ ಬಾಲಕಿ ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಳ್ಳುತ್ತಿದ್ದಾಳೆ.

ತಾಯಿ ಮಲಗುವ ಕೋಣೆಗೆ ಹೋದಾಗ ಮಗಳ ಮೃತದೇಹ ನೇತಾಡುತ್ತಿರುವುದು ಕಂಡುಬಂದಿದೆ.


ಈ ಬಾಲಕಿ ಕಳೆದ ಎರಡು ತಿಂಗಳಿನಿಂದ ಮರಾಠಿ ಮತ್ತು ಇಂಗ್ಲಿಷ್‍ನಲ್ಲಿ ಸಾವಿನ ಕುರಿತು ಕವನಗಳನ್ನು ಬರೆಯುತ್ತಿದ್ದಳು. ಪೊಲೀಸರಿಗೆ ಬಾಲಕಿಯ ಮಲಗುವ ಕೋಣೆಯಲ್ಲಿ ನೋಟ್‍ ಬುಕ್ ಸಿಕ್ಕಿದ್ದು, ಅದರಲ್ಲಿ ಕೊರೊನಾವೈರಸ್ ಹರಡಬೇಕು, ಅದರಿಂದ ನಾನು ಸಾಯಬೇಕು ಎಂದು ಬರೆದಿದ್ದಾಳೆ.


ಇನ್ನು ತಮ್ಮ ಮಗಳು ವಿದ್ಯಾಭ್ಯಾಸದಲ್ಲಿ ಉತ್ತಮಳಾಗಿದ್ದು, ಪ್ರತಿ ವರ್ಷ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

ತಾಯಿಯೊಂದಿಗೆ ಕೊನೆಯ ಬಾರಿ ಮಾತನಾಡಿದಾಗ ಆಕೆಯ ನಡವಳಿಕೆ ಸಾಮಾನ್ಯವಾಗಿತ್ತು ಎಂದು ಹೇಳಲಾಗಿದೆ. ಅಜ್ನಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.


0 Comments

Post a Comment

Post a Comment (0)

Previous Post Next Post