ಮಂಗಳೂರು: ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪನಾ ದಿನಾಚರಣೆ ನಾಳೆ (ಮಾ.14) ನಡೆಯಲಿದೆ. ನಗರದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.
ಬೆಳಗಾವಿ- ನಿಡಸೋಶಿಯ ಸಿದ್ಧ ಸಂಸ್ಥಾನ ಜಗದ್ಗುರು ಶ್ರೀ ದುರದುಂಡೀಶ್ವರ ಮಠದ ಪರಮಪೂಜ್ಯ ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಪರಮಪೂಜ್ಯ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ (ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು), ಮತ್ತು ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ (ರಾಮಕೃಷ್ಣ ವಿವೇಕಾನಂದ ಆಶ್ರಮ, ರಾಣೆಬೆನ್ನೂರು) ಇವರ ದಿವ್ಯ ಉಪಸ್ಥಿತಿ ಇರಲಿದೆ.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ನಿವೃತ್ತ ಯೋಧರು, ಭಾರತೀಯ ಸೇನೆ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು), ಡಾ. ಜಿ.ಎಸ್ ಮರಿಗುದ್ದಿ (ಸಾಹಿತಿ, ಬೆಳಗಾವಿ) ಮತ್ತು ಸ್ವಾಮಿ ಏಕಗಮ್ಯಾನಂದಜಿ (ಯುವ ಸಂಯೋಜಕರು, ರಾಮಕೃಷ್ಣ ಮಠ, ಮಂಗಳೂರು) ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ 'ಟುಗೆದರ್ ವಿ ಆರ್ ಸ್ಟ್ರಾಂಗರ್' (ಜತೆಗೂಡಿದರೆ ನಾವು ಬಲಿಷ್ಠರು) ಎಂಬ ವಿಚಾರದಲ್ಲಿ ಸಂವಾದ ಏರ್ಪಡಿಸಲಾಗಿದೆ. ಪ್ರೊ. ಕೆ. ರಘೋತ್ತಮ ರಾವ್ (ಚೇರ್‌ಮನ್, ಮಾನಸ ತರಬೇತಿ ಕೇಂದ್ರ, ಬೆಂಗಳೂರು) ಇವರು ಸಂವಾದ ನಡೆಸಿಕೊಡಲಿದ್ದಾರೆ.
ಬಳಿಕ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರಿಂದ ಹರಿಕಥಾ ಜಾದೂ ಪ್ರದರ್ಶನ ನಡೆಯಲಿದೆ.
ಈಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ದಿಲ್‌ರಾಜ್ ಆಳ್ವ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ರಂಜನ್ ಬೆಳ್ಳರ್ಪಾಡಿ ಅವೆರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment