ಉಡುಪಿ: ಕಸಾಪ ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭವು ಮಾರ್ಚ್ 12, ಶನಿವಾರ ಸಂಜೆ 6.30ಕ್ಕೆ ಉಡುಪಿ ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಲೇಖಕರು ಹಾಗೂ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಮಣಿಪಾಲ ಯುನಿವರ್ಸಲ್ ಪ್ರೆಸ್ ನ ಪ್ರಧಾನ ಸಂಪಾದಕರಾದ ಪ್ರೋ. ನೀತಾ ಇನಾಂದಾರ್ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.
ಪ್ರಾರಂಭದಲ್ಲಿ ಕನ್ನಡ ಗೀತಗಾಯನ, ಹಾಗೂ ನೃತ್ಯ ಕಾರ್ಯಕ್ರಮವಿದೆ. 6.45ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಪ್ರಾರಂಭವಾಗಿ ಗಂಟೆ 8.00ಕ್ಕೆ ಭೋಜನವನ್ನು ಏರ್ಪಡಿಸಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment