ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಹಿಲ್-ಸೈಡ್ ಸಾದರಪಡಿಸುವ "2022ರ ವೃತ್ತಿ ಸೇವಾ ಪ್ರಶಸ್ತಿ" ಗಳನ್ನು ಈ ಬಾರಿ ಮೂಕ ಪ್ರಾಣಿಗಳ ಸೇವೆಯಲ್ಲಿ ಶ್ರೇಷ್ಠತೆಯನ್ನು ಮೆರೆದ ಶ್ರೀಮತಿ ರಜನಿ ಶೆಟ್ಟಿ, ಜನಸೇವಾ ವೃತ್ತಿ ನಿಷ್ಠಾವಂತ ರಮೇಶ್ ಯಾದವ್ ಹಾಗೂ ವಾಹನ ಸಂಚಾರ ನಿಯಂತ್ರಣಕ್ಕೆ ಸಹಾಯಕರಾಗಿ ನಿಸ್ವಾರ್ಥ ಸೇವೆ ಮಾಡುವ ರಮೇಶ್ ಗೌಡ ಇವರಿಗೆ ನೀಡಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಪ್ರವೀಣಚಂದ್ರ ಶರ್ಮ ರೊಂದಿಗೆ ಕಾರ್ಯದರ್ಶಿ ರೊ.ಮನೀಶ್ ರಾವ್, ವಲಯ ಸೇನಾನಿ ರೊ.ಸತೀಶ್ ಬಿಕೆ, ವೃತ್ತಿ ಸೇವಾ ನಿರ್ದೇಶಕ ರೊ. ಡಾ॥ ರಾಹುಲ್ ಟಿ ಜಿ, ರೊ.ರಂಗನಾಥ ಕಿಣಿ, ರೊ. ಸುರೇಶ್ ಕಿಣಿ, ರೊ.ಡಾ।ಅಬ್ರಹಾಂ ಝಕಾರಿಯಾಸ್, ರೊ.ಶ್ಯಾಮಲಾಲ್ ವೈ, ರೊ.ವಿಷ್ಣುದಾಸ ಶೇವಗೂರ್ ಮೊದಲಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment