ಲಕ್ನೋ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ 9 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ನಂತರ ಹತ್ಯೆಗೈದಿದ್ದಾನೆ. ಇಗ್ಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ತಿಂಡಿ ಕೊಡಿಸುವುದಾಗಿ ಆಮಿಷ ಒಡ್ಡಿ ಮೂವರು ಬಾಲಕಿಯರನ್ನು ಕರೆದುಕೊಂಡು ಹೋಗಿದ್ದಾನೆ. ಇಬ್ಬರು ಬಾಲಕಿಯರಿಗೆ ತಿಂಡಿ ಕೊಡಿಸಿ ಮನೆಗೆ ಕಳುಹಿಸಿದ್ದಾನೆ. ನಂತರ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದು ಶವವನ್ನು ಬಚ್ಚಿಟ್ಟಿದ್ದಾನೆ.
ಆದರೆ ಬಾಲಕಿ ಮನೆಗೆ ಬಾರದೆ ಇದ್ದಾಗ ಮನೆಮಂದಿ ಹುಡುಕಾಟ ನಡೆಸಿದ್ದಾರೆ. ನಂತರ ಇಬ್ಬರು ಬಾಲಕಿಯರು ಚಿಕ್ಕಪ್ಪ ತಿಂಡಿಗಳನ್ನು ಖರೀದಿಸಲು ಕರೆದುಕೊಂಡು ಹೋಗಿದ್ದಾನೆ ಎಂದು ಸಹೋದರಿಯೊಬ್ಬರು ಪೋಷಕರಿಗೆ ತಿಳಿಸಿದರು. ನಂತರ ಬಾಲಕಿ ಕುಟುಂಬಸ್ಥರು ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಯು ಬಾಲಕಿಯ ಕುಟುಂಬದೊಂದಿಗೆ ಹುಡುಕಾಟಕ್ಕೆ ಹೋಗುತ್ತಿದ್ದನು. ಆರೋಪಿಗಳು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಬೇರೆಡೆಗೆ ಕರೆದೊಯ್ದು ಹುಡುಕಾಟದ ವೇಳೆ ದಾರಿ ತಪ್ಪಿಸುತ್ತಿದ್ದನು. ಆರೋಪಿ ಸ್ಥಳೀಯ ನಿವಾಸಿಯಾಗಿರುವ ಕಾರಣ ಬಾಲಕಿ ಆತನನ್ನು ಚಿಕ್ಕಪ್ಪ ಎಂದು ಕರೆಯುತ್ತಿದ್ದಳು.
Post a Comment