ದಾವಣಗೆರೆ : ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಆನಗೋಡು ಸಮೀಪದ ಉಳುಪಿನಕಟ್ಟೆ ಫ್ಲೈಓವರ್‌ನಲ್ಲಿ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಮಹಿಳೆ ಸೇರಿ ಮೂರು ಮಂದಿ ಮೃತಪಟ್ಟಿದ್ದಾರೆ.
ಟ್ರ್ಯಾಕ್ಟರ್ ಚಾಲಕ, ದಾವಣಗೆರೆ ತಾಲ್ಲೂಕಿನ ಹಾಲವರ್ತಿಯ ಎಚ್.ಬಿ.ಹನುಮಂತಪ್ಪ (40), ಟ್ರ್ಯಾಕ್ಟರ್‌ನಲ್ಲಿದ್ದ ಹಾಲವರ್ತಿಯ ಎಚ್.ಡಿ.
ಕಿರಣ್ (34), ಲಾರಿ ಚಾಲಕನ ಪತ್ನಿ, ನಿಟುವಳ್ಳಿಯ ಅನ್ನಪೂರ್ಣಮ್ಮ (30) ಮೃತಪಟ್ಟವರು. ಹಾಲವರ್ತಿಯ ಬಸವರಾಜ ಮತ್ತು ರೇವಣಸಿದ್ಧಪ್ಪ ಗಾಯಗೊಂಡವರು.
ಟ್ರ್ಯಾಕ್ಟರ್‌ನಲ್ಲಿ ದಾವಣಗೆರೆಯಿಂದ ಪೈಪ್‌ಗಳನ್ನು ತುಂಬಿಸಿಕೊಂಡು ಹಾಲವರ್ತಿ ಕಡೆಗೆ ಹೋಗುತ್ತಿತ್ತು. ದಾವಣಗೆರೆಯಿಂದ ಬೆಂಗಳೂರು ಕಡೆಗೆ ನಿಟುವಳ್ಳಿ ಸಂತೋಷ್ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯು ಟ್ರ್ಯಾಕ್ಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಲಾರಿಯ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅನ್ನಪೂರ್ಣಮ್ಮ ಅವರು ವಿಧಾನಸೌಧ ನೋಡಬೇಕು ಎಂದು ತನ್ನ ಪತಿ ಜೊತೆಗೆ ಲಾರಿಯಲ್ಲಿ ಹೊರಟಿದ್ದರು.
ಈ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Post a Comment